ಮೂಗೂರು ಡೇರಿಗೆ 2.24 ಲಕ್ಷ ರೂ. ಲಾಭ

1 (2)
Published on

ಮೂಗೂರು: ಮೂಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.


ಸಂಘದ ಅಧ್ಯಕ್ಷ ಎಂ.ಎಂ.ಬಸವಣ್ಣ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘವು 2.24 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಒಕ್ಕೂಟದಿಂದ ಸಬ್ಸಿಡಿ ಸಾಲ ದೊರೆಯದ ಕಾರಣ ಹೈನುಗಾರಿಕೆಯನ್ನು ಉತ್ತೇಜಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯರ ಸಹಕಾರದಿಂದ ಸಂಘವು ಹಂತ ಹಂತವಾಗಿ ಪ್ರಗತಿ ಹೊಂದಿ ಬಿಎಂಸಿ ಕೇಂದ್ರವಾಗಿ ಮೇಲ್ದರ್ಜೆಗೇರಿದೆ ಎಂದರು.


ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ 6 ಜನ ಹಾಲು ಉತ್ಪಾದಕರನ್ನು ಸನ್ಮಾನಿಸಲಾಯಿತು. ಒಕ್ಕೂಟದ ವಿಸ್ತರಣಾಧಿಕಾರಿ ಸಿ.ಅನಿತಾ, ಸಿಇಒ ಎಂ ನಾಗೇಂದ್ರ, ಸಂಘದ ಉಪಾಧ್ಯಕ್ಷ ಮಹಾದೇವಸ್ವಾಮಿ, ನಿರ್ದೇಶಕರಾದ ಮಹಾದೇವನಾಯ್ಕ, ಮಾದೇಗೌಡ, ಗೌರಮ್ಮ, ಸುಂದ್ರಮ್ಮ, ಮಂಜುಳಾ, ಮಾದೇವಶೆಟ್ಟಿ, ಮಲ್ಲೇಶ್, ಮುಖಂಡರಾದ ಎಂ.ಡಿ.ಬಸವರಾಜು, ಎಂ.ಎಂ.ಶಿವಕುಮಾರ ಸ್ವಾಮಿ, ನಾಗರಾಜು , ಎಸ್.ಸಿದ್ದರಾಜು, ರಂಗಯ್ಯ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net