19ರಂದು ಭಕ್ತಿಗೀತೆ ಗಾಯನ ಕಾರ್ಯಕ್ರಮ

Music _1
Published on

ಮೈಸೂರು: ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ವತಿಯಿಂದ ಜ.19 ರಂದು ಸಂಜೆ 4 ರಿಂದ ರಾತ್ರಿ 8ರವರೆಗೆ ಕುವೆಂಪು ನಗರದ ಯೋಗ ಸಂಸ್ಕೃತಿ ಕಲಾ ಭವನದಲ್ಲಿ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳ ಭಕ್ತಿಗೀತೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ರಾಮಚಂದ್ರಭಟ್ ತಿಳಿಸಿದರು.

ವಿಶ್ವೇಶ್ವರ ಭಟ್ ಹೊನ್ನಾವರ, ಡಾ.ಶಿಲ್ಪಾ ಭಟ್, ಮಮತಾ ಭಟ್, ಗೀತಾ ಉಪಾಧ್ಯಾಯ, ರಶ್ಮಿ ರಘುರಾಂ ಗಾಯಕರಾಗಿದ್ದು, ಇಂದ್ರಕುಮಾರ್ ಹಾರ್ಮೋನಿಯಂನಲ್ಲಿ, ಗಣೇಶ್ ಭಟ್ ಕೀಬೋರ್ಡ್‌ನಲ್ಲಿ, ರಾಮದಾಸ ಭಟ್ ತಬಲದಲ್ಲಿ ಸಹಕರಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಯೋಜಕರಾದ ತೇಜಸ್ವಿ, ಸಂಧ್ಯಾ ರವಿ, ಜಿ.ಟಿ. ಭಟ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net