

ತೂತುಕುಡಿ: ಭಾರತೀಯ ವಾಯುಸೇನೆಯ ಮಾಜಿ ಸಿಬ್ಬಂದಿ ಪಿ ದುರೈ ಪಾಂಡಿಯನ್ಸ್ (ಪಿ.ಡಿ. ಪಾಂಡಿಯನ್) ಅವರ 100 ನೇ ಹುಟ್ಟುಹಬ್ಬವನ್ನು ಅರುಮುಗನೇರಿಯಲ್ಲಿ ಸೋಮವಾರ ಆಚರಿಸಲಾಯಿತು. ಜಗತ್ತಿನಾದ್ಯಂತ ವಿವಿಧ ಭಾಗಗಳಿಂದ ಬಂದ ರಕ್ಷಣಾ ಸಿಬ್ಬಂದಿ ಮತ್ತು ಹಿತೈಷಿಗಳು ಭಾರತದ ಹಿರಿಯ ಜೀವಂತ ವಾಯುಪಡೆಯ ಸಿಬ್ಬಂದಿಗೆ ಶುಭ ಹಾರೈಸಿದರು.
ಪಾಂಡಿಯನ್ 1944 ರಲ್ಲಿ ರಾಯಲ್ ಇಂಡಿಯನ್ ಏರ್ ಫೋರ್ಸ್ (ಆರ್ಐಎಎಫ್) ಗೆ ಏರ್ಕ್ರಾಫ್ಟ್ ಮ್ಯಾನ್ ಆಗಿ ಸೇರಿಕೊಂಡು 1975 ರಲ್ಲಿ ತಮ್ಮ 55 ನೇ ವಯಸ್ಸಿನಲ್ಲಿ ಗ್ರೌಂಡ್ ಟ್ರೇನಿಂಗ್ ಬೋಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಆರ್ಐಎಎಫ್ಗೆ ಸೇರುವ ಮುನ್ನ ಅವರು ಶಾಲೆಯೊಂದರಲ್ಲಿ ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
31 ವರ್ಷಗಳ ಸೇವೆಯಲ್ಲಿ, ಪಾಂಡಿಯನ್ ಸಾವಿರಾರು ಏರ್ಕ್ರಾಫ್ಟ್ಮನ್ಗಳಿಗೆ ತರಬೇತಿ ನೀಡಿದ್ದರು ಮತ್ತು ಸ್ವತಃ ಸಮರ್ಥ ಕ್ರೀಡಾಪಟುವಾಗಿದ್ದರು. ಅವರು ಸದರ್ನ್ ಕಮಾಂಡ್ ವಾಲಿಬಾಲ್ ತಂಡದ ನಾಯಕತ್ವ ವಹಿಸಿದ್ದರು ಮತ್ತು ವಿಜಯವಾಡ ಸದರ್ನ್ ರೈಲ್ವೆ ಇನ್ಸ್ಟಿಟ್ಯೂಟ್ ವಾಲಿಬಾಲ್ ತಂಡದ ತರಬೇತುದಾರರಾಗಿದ್ದರು. ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ನಿರ್ದೇಶನಾಲಯದ ಸಂಪರ್ಕಕ್ಕೆ ಬಂದಾಗ 1963-64ರಲ್ಲಿ ಎನ್‌ಸಿಸಿ ಪಠ್ಯಕ್ರಮವನ್ನು ಮೂರು ವರ್ಷದಿಂದ ಎರಡು ವರ್ಷಕ್ಕೆ ಕಡಿಮೆಗೊಳಿಸಲು ಸಹ ಅವರು ಕೆಲಸ ಮಾಡಿದರು.
101 ಕ್ಕೆ ಕಾಲಿಡುತ್ತಿರುವುದು ಅವರಿಗೇನು ಹೊಸ ದಿನದ ವಿಶೇಷತೆ ಎನಿಸುತ್ತಿಲ್ಲವಂತೆ. ಏಕೆಂದರೆ ಅವರು ಸದೃಢ ದೈಹಿಕ, ಮಾನಸಿಕ ಆರೋಗ್ಯ, ನೈರ್ಮಲ್ಯವನ್ನು ಕಾಪಾಡಿಕೊಂಡಿದ್ದಾರೆ. ದಿನಪತ್ರಿಕೆ ಓದುವುದು ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಲು ದೈನಂದಿನ ವ್ಯಾಯಾಮ ಮಾಡುವ ಮೂಲಕ ಅವರ ದಿನದ ಆರಂಭವಾಗುತ್ತದೆ.
ಹತ್ತು ವರ್ಷಗಳ ಹಿಂದೆ ಚಿಕೂನ್‌ಗುನ್ಯಾದಿಂದ ಅವರು ಬಳಲದಿದ್ದರೆ, ಅವರು ಈಗಲೂ ಕ್ರೀಯಾಶೀಲ ಕ್ರೀಡಾಪಟುವಾಗಿರುತ್ತಿದ್ದರು ಎನ್ನುತ್ತಾರೆ ಅವರ ಪುತ್ರ ಜಾಕೋಬ್. ಚಿಕೂನ್‌ಗುನ್ಯಾದಿಂದ ಅವರ ಬಲಗಾಲಿಗೆ ತೊಂದರೆಯಾಗಿದೆಯಂತೆ.
ತಮ್ಮ ಸೇನೇಯಲ್ಲಿನ ಸೇವಾವಧಿಯ ಅನುಭವಗಳನ್ನು ಹಂಚಿಕೊಂಡ ಪಾಂಡಿಯನ್, 1971 ರಲ್ಲಿ ನಡೆದ ಇಂಡೋ-ಪಾಕಿಸ್ತಾನ ಯುದ್ಧದ ಘಟನೆಯನ್ನು ನೆನಪಿಸಿಕೊಂಡರು.