ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ಕಲಬೆರಕೆ ಇಂಧನ; ಪೆಟ್ರೋಲ್ ಬಂಕ್​ಗೆ ಬೀಗ| Water-mixed diesel

cm car
Published on

ರತ್ಲಂ : ಮಧ್ಯಪ್ರದೇಶ ಸಿಎಂ ಡಾ. ಮೋಹನ್ ಯಾದವ್ ಅವರ ಬೆಂಗಾವಲು ಪಡೆಯಲ್ಲಿ ಪ್ರಮುಖ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಸಿಎಂ ಪ್ರಾದೇಶಿಕ ಕೈಗಾರಿಕೆ, ಕೌಶಲ್ಯ ಮತ್ತು ಉದ್ಯೋಗ ಸಮಾವೇಶದಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಅವರ ಬೆಂಗಾವಲು ಪಡೆಯಲ್ಲಿದ್ದ 19 ಕಾರುಗಳು ಇದ್ದಕ್ಕಿದ್ದಂತೆ ಒಂದರ ನಂತರ ಒಂದರಂತೆ ರಸ್ತೆಯಲ್ಲಿ ನಿಂತಿವೆ. ನಂತರ ಇದನ್ನು ಪರಿಶೀಲಿಸಿದಾಗ ವಾಹನಗಳಲ್ಲಿ ಡೀಸೆಲ್ ಜೊತೆಗೆ ನೀರು ತುಂಬಿರುವುದು ತನಿಖೆಯಿಂದ ತಿಳಿದುಬಂದಿದೆ. ಆಡಳಿತವು ತಕ್ಷಣ ಕ್ರಮ ಕೈಗೊಂಡು ಸಂಬಂಧಪಟ್ಟ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿದೆ.

ನಿನ್ನೆ (26) ರಾತ್ರಿ 10 ಗಂಟೆ ಸುಮಾರಿಗೆ, ಸಿಎಂ ಬೆಂಗಾವಲು ಪಡೆಯ 19 ಕಾರುಗಳು ರತ್ಲಂ ನಗರ ವ್ಯಾಪ್ತಿಯ ದೋಸಿಗಾಂವ್‌ನಲ್ಲಿರುವ ಭಾರತ್ ಪೆಟ್ರೋಲಿಯಂನ ಶಕ್ತಿ ಇಂಧನ ಪೆಟ್ರೋಲ್ ಪಂಪ್‌ಗೆ ಡೀಸೆಲ್ ತುಂಬಿಸಲು ಹೋಗಿವೆ. ಡೀಸೆಲ್ ತುಂಬಿದ ಸ್ವಲ್ಪ ಸಮಯದ ಬಳಿಕ ಎಲ್ಲಾ ವಾಹನಗಳು ಸ್ವಲ್ಪ ದೂರ ಹೋದ ನಂತರ ಇದ್ದಕ್ಕಿದಂತೆ ನಿಂತಿವೆ. ಕೊನೆಗೆ ಎಲ್ಲಾ ವಾಹನಗಳನ್ನು ತಳ್ಳಿಕೊಂಡು ರಸ್ತೆಬದಿಯಲ್ಲಿ ನಿಲ್ಲಿಸಲಾಗಿದೆ.

ಮಾಹಿತಿ ಬಂದ ತಕ್ಷಣ, ತಹಶೀಲ್ದಾರ್ ಆಶಿಶ್ ಉಪಾಧ್ಯಾಯ, ಆಹಾರ ಮತ್ತು ಸರಬರಾಜು ಅಧಿಕಾರಿ ಆನಂದ್ ಗೋರ್ ಸೇರಿದಂತೆ ಆಡಳಿತ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. 20 ಲೀಟರ್ ಡೀಸೆಲ್ ತುಂಬಿದ ವಾಹನಗಳಲ್ಲಿ ಸುಮಾರು 10 ಲೀಟರ್ ನೀರು ಇರುವುದು ತನಿಖೆಯಿಂದ ತಿಳಿದುಬಂದಿದೆ. ಬಹುತೇಕ ಎಲ್ಲಾ ವಾಹನಗಳಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿದೆ.

(ಏಜೆನ್ಸೀಸ್)

ಟ್ರಕ್ ಚಾಲಕನೊಬ್ಬ 200 ಲೀಟರ್ ಡೀಸೆಲ್ ತುಂಬಿಸಿದ್ದನು. ಅದು ಸ್ವಲ್ಪ ದೂರ ಹೋದ ನಂತರ ನಿಂತಿರುವುದು ಕಂಡು ಬಂದಿದೆ. ಮಳೆಯಿಂದಾಗಿ ಪೆಟ್ರೋಲ್ ಟ್ಯಾಂಕ್‌ನಲ್ಲಿ ನೀರು ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ನಯಬ್ ತಹಶೀಲ್ದಾರ್ ಆಶಿಶ್ ಉಪಾಧ್ಯಾಯ ಹೇಳಿದ್ದಾರೆ. ಆಹಾರ ಮತ್ತು ಸರಬರಾಜು ಇಲಾಖೆ ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿದೆ. ಈ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net