

ಸೋಮವಾರಪೇಟೆ: ಪುಷ್ಪಗಿರಿ ಛಾಯಾಗ್ರಾಹಕರ ಸಂಘ ವತಿಯಿಂದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಬೆಟ್ಟದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಸಾಲೊಮನ್ ಡೇವಿಡ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಕ್ಕಳಿಗೆ ಸ್ವೆಟರ್, ಲೇಖನ ಸಾಮಗ್ರಿಗಳು, ಟೈ ಬೆಲ್ಟ್ ಮತ್ತು ವಾಟರ್ ಬಾಟಲ್‌ಗಳನ್ನು ವಿತರಿಸಲಾಯಿತು.
ಗೌರವಾಧ್ಯಕ್ಷ ಜನಾರ್ದನ್, ಕಾರ್ಯದರ್ಶಿ ಅಭಿಲಾಷ್, ಉಪಾಧ್ಯಕ್ಷ ದೀಪು, ಖಜಾಂಚಿ ಅರುಣ್, ಜಿಲ್ಲಾ ಸಂಘದ ನಿರ್ದೇಶಕ ಹರೀಶ್ ಕೋಟ್ಯನ್, ಸಂಘದ ನಿರ್ದೇಶಕರಾದ ನವೀನ್, ಸಲೀಂ, ಮಂಜುನಾಥ್, ರಾಜು, ಸುಬ್ರಮಣಿ, ಮುಖ್ಯಶಿಕ್ಷಕಿ ಕವಿತಾ ಇದ್ದರು.