

ನವದೆಹಲಿ: ಬಹುರಾಷ್ಟ್ರೀಯ ಕಂಪನಿಗಳು ಇತ್ತೀಚೆಗೆ ಉದ್ಯೋಗಿಗಳಿಗೆ ಪ್ಯಾಕೇಜ್(package) ಕೊಟ್ಟು ಸಮಯ, ಸಂದರ್ಭ, ಹಬ್ಬ, ಹರಿದಿನ ನೋಡದೆ ದುಡಿಸಿಕೊಳ್ಳುವುದನ್ನು ಕಾಣಬಹುದು. ಆದರೆ ನೌಕರರು ಉದ್ದಿಮೆದಾರರ ಇಂತಹ ಬಿಡುವಿಲ್ಲದ ನೌಕರಿಯಿಂದ ಬೇಸತ್ತು ಅನ್ಯ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದನ್ನು ಕಾಣಬಹುದು. ಅದೇ ರೀತಿ ಇಲ್ಲೊಬ್ಬ ಯುವತಿ 23 ಲಕ್ಷ ರೂ.ನ ಪ್ಯಾಕೋಜ್ ಬಿಟ್ಟು 18 ಲಕ್ಷ ರೂ. ಸಂಬಳದ ಕೆಲಸಕ್ಕೆ ಸೇರಿಕೊಂಡಳು. ತನ್ನ ವೈಯಕ್ತಿಕ ಜೀವನಕ್ಕೆ ಸಮಯವನ್ನು ನೀಡುವ ಎರಡನೇ ಉದ್ಯೋಗವನ್ನು ಬಯಸಿದ್ದರಿಂದ ಆಕೆ ಕಡಿಮೆ ಸಂಬಳವನ್ನು ಸ್ವೀಕರಿಸಿದಳು. ಈ ಘಟನೆ ಈಗ ವೈರಲ್ ಆಗಿದೆ.
23 ಲಕ್ಷ ರೂ.ನ ಪ್ಯಾಕೇಜ್ ನ್ನು ತಿರಸ್ಕರಿಸಿ ಕೇವಲ ರೂ.18 ಲಕ್ಷ ಸಂಬಳದ ಕೆಲಸಕ್ಕೆ ಸೇರಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯನ್ನು ಯುವತಿಯ ಸ್ನೇಹಿತ ಕಟಾರಿಯಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಪೋಸ್ಟ್ ಪ್ರಸ್ತುತ ಟ್ರೆಂಡಿಂಗ್ ಆಗಿದೆ. ಮೊದಮೊದಲು ಆಕೆ ನಿರ್ಧಾರ ತಪ್ಪು ಎಂದು ಅನಿಸಿದ್ದು, ಆಳವಾಗಿ ಯೋಚಿಸಿದ ಬಳಿಕ ಸ್ನೇಹಿತೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂಬ ನಂಬಿಕೆ ಬಂದಿತು ಎಂದು ಕಟಾರಿಯಾ ಪ್ರತಿಕ್ರಿಯಿಸಿದ್ದಾರೆ.
ಕಟಾರಿಯಾ ಪ್ರಕಾರ, ಅವನ ಸ್ನೇಹಿತೆಗೆ 23 ಲಕ್ಷ ರೂಪಾಯಿ ಪ್ಯಾಕೇಜ್‌ನೊಂದಿಗೆ ಪ್ರಮುಖ ಕಂಪನಿಯಲ್ಲಿ ಕೆಲಸ ಸಿಕ್ಕಿತು. ವಾರದಲ್ಲಿ ಆರು ದಿನ ಕೆಲಸವಿದ್ದು, ಮನೆಯಿಂದ ಕೆಲಸ ಮಾಡುವ ಸೌಲಭ್ಯವಿಲ್ಲ. ಎರಡನೇ ಕಂಪನಿಯಲ್ಲಿ ಕೇವಲ 18 ಲಕ್ಷ ನೀಡುವುದಾಗಿ ಹೇಳಿದ್ದರೂ ವಾರಕ್ಕೆ ಮೂರು ದಿನ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ಎರಡು ಆಫರ್ ಗಳ ಬಗ್ಗೆ ಯೋಚಿಸಿದ ಆಕೆ ಅಂತಿಮವಾಗಿ 18 ಲಕ್ಷ ವಾರ್ಷಿಕ ಸಂಬಳದ ಕೆಲಸವನ್ನು ಆಯ್ಕೆ ಮಾಡಿದ್ದು ಸರಿಯಾಗಿದೆ ಎನಿಸಿತು ಎಂದು ಬರೆದುಕೊಂಡಿದ್ದಾನೆ.
ಹೈಬ್ರಿಡ್ ಕೆಲಸದ ಸಂಸ್ಕೃತಿ ಹೊಂದಿರುವ ಸಂಸ್ಥೆಯಲ್ಲಿ ಕುಟುಂಬ ಮತ್ತು ಕೆಲಸಕ್ಕಾಗಿ ಸಾಕಷ್ಟು ಸಮಯವನ್ನು ವಿನಿಯೋಗಿಸುವ ಅವಕಾಶವು ಅಡ್ಡಿಯಾಗುತ್ತದೆ ಎಂದು ತನ್ನ ಸ್ನೇಹಿತೆ ಭಾವಿಸಿದ್ದಾಳೆ. ಎಂದು ಕಟಾರಿಯಾ ಹೇಳಿದರು. ಈ ಹಿಂದೆ ತನ್ನ ಸ್ನೇಹಿತೆ ದೀರ್ಘಾವಧಿ ಕೆಲಸ ಮಾಡಿದ್ದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಎಂದು ವಿವರಿಸಿದ್ದಾರೆ. ಇದರೊಂದಿಗೆ ಜೀವನದಲ್ಲಿ ತನಗೆ ಏನು ಬೇಕು ಎಂಬ ದೃಷ್ಟಿಕೋನ ಬದಲಾಗಿದೆ ಎಂದೂ ಸಹ ಬರೆದುಕೊಂಡಿದ್ದಾರೆ.
ಇಂದಿನ ವೇಗದ ಕಾರ್ಪೊರೇಟ್ ಜಗತ್ತಿನಲ್ಲಿ ಸಂಬಳಕ್ಕಿಂತ ಆರೋಗ್ಯಕ್ಕೆ ಆದ್ಯತೆ ನೀಡುವ ಜಾಗೃತಿ ಹೆಚ್ಚುತ್ತಿದೆ. ಕೆಲಸವನ್ನು ಮೀರಿ ಮತ್ತೊಂದು ಜೀವನವನ್ನು ಆನಂದಿಸಲು ನಮಗೆಲ್ಲರಿಗೂ ಹಕ್ಕಿದೆ" ಎಂದು ಕಟಾರಿಯಾ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.
ಕಟಾರಿಯಾ ಅಭಿಪ್ರಾಯವನ್ನು ಹಲವು ನೆಟ್ಟಿಗರು ಒಪ್ಪಿದ್ದಾರೆ. ಯುವತಿಯ ನಿರ್ಧಾರ ಸರಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ.