18 ಇಲಾಖೆ ಸಿಬ್ಬಂದಿಗೆ ಹಾಜರಿ ಕಡ್ಡಾಯ: ಕೇಂದ್ರ ಸ್ಥಾನ ಬಿಡದಿರುವಂತೆ ಸೂಚನೆ

160720 Maski Lions Club Honorary of Municipal Staff
ಮಸ್ಕಿ ಪುರಸಭೆ ಸಿಬ್ಬಂದಿಗೆ ಲಯನ್ಸ್ ಕ್ಲಬ್‌ನಿಂದ ಸನ್ಮಾನ ಮಾಡಲಾಯಿತು.
Published on

ಬೆಂಗಳೂರು: ಕರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ 18 ಅಗತ್ಯ ಸೇವೆಗಳ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಿರಬೇಕು ಹಾಗೂ ಕೇಂದ್ರಸ್ಥಾನ ಬಿಡಬಾರದೆಂದು ಸರ್ಕಾರ ಸೂಚನೆ ನೀಡಿದೆ.

ಆರೋಗ್ಯ, ವೈದ್ಯಕೀಯ ಶಿಕ್ಷಣ, ಒಳಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಆಹಾರ, ವಾರ್ತಾ, ಸಾರಿಗೆ, ಇಂಧನ, ಖಜಾನೆ, ಡಿಪಿಎಆರ್, ಪಶು ಸಂಗೋಪನೆ, ಕಾರ್ವಿುಕ, ಅರಣ್ಯ, ಕೃಷಿ, ಕೃಷಿ ಮಾರುಕಟ್ಟೆ ಹಾಗೂ ತೋಟಗಾರಿಕೆ ಅಗತ್ಯ ಸೇವೆಯ ಇಲಾಖೆಗಳಾಗಿವೆ ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಈ 18 ಇಲಾಖೆಗಳ ಸಚಿವಾಲಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಮತ್ತು ನೌಕರರು ಕಡ್ಡಾಯವಾಗಿ ಹಾಜರಿರಬೇಕು. ಕೋವಿಡ್ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ನಿಯೋಜನೆ ಆಗಿರುವ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯದಲ್ಲಿರಬೇಕು ಎಂದು ಸೂಚಿಸಿದ್ದಾರೆ. ಉಳಿದ ಕಚೇರಿ, ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆ, ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಶೇ.50 ಸಿಬ್ಬಂದಿ ಇರಬೇಕು, ಇನ್ನುಳಿದ ಶೇ.50 ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು ಎಂದು ಆದೇಶದಲ್ಲಿ ಸಿಎಸ್ ತಿಳಿಸಿದ್ದಾರೆ. ದೃಷ್ಟಿದೋಷ ಇರುವವರು, ಅಂಗವೈಕಲ್ಯಕ್ಕೆ ಒಳಗಾದ ವರು ಹಾಗೂ ಗರ್ಭಿಣಿಯರಿಗೆ ವಿನಾಯಿತಿ ನೀಡಲಾ ಗಿದೆ. ಈ ಆದೇಶ ಮೇ 4ರ ತನಕ ಜಾರಿಯಲ್ಲಿರುತ್ತದೆ.

ಸರ್ಕಾರಿ ನೌಕರರಿಗೆ ಚಿಕಿತ್ಸಾ ಪ್ಯಾಕೇಜ್

ಬೆಂಗಳೂರು: ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರು ಕೋವಿಡ್ ಸೋಂಕಿತರಾಗಿ ಖಾಸಗಿ ಆಸ್ಪತ್ರೆಯಲ್ಲಿ ಪಡೆದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮರುಪಾವತಿಗೆ ಸಂಬಂಧಿಸಿದಂತೆ ಇದ್ದ ಗೊಂದಲಕ್ಕೆ ಸರ್ಕಾರ ತೆರೆ ಎಳೆದಿದ್ದು, ಸ್ಪಷ್ಟ ಆದೇಶ ಪ್ರಕಟಿಸಿದೆ. ಜನರಲ್ ವಾರ್ಡ್-10 ಸಾವಿರ ರೂ., ಹೈ ಡಿಪೆನ್​ಡೆನ್ಸಿ ಯೂನಿಟ್- 12 ಸಾವಿರ ರೂ., ವೆಂಟಿಲೆಟರ್ ರಹಿತ ಐಸೋಲೇಶನ್- 15 ಸಾವಿರ ರೂ., ವೆಂಟಿಲೆಟರ್ ಸಹಿತ ಐಸೋಲೇಶನ್ ವಾರ್ಡ್​ಗೆ 25 ಸಾವಿರ ರೂ.ನಂತೆ ದರ ನಿಗದಿಪಡಿಸಲಾಗಿದೆ.

ಆಸ್ಪತ್ರೆ ನೀಡಿರುವ ಚಿಕಿತ್ಸಾ ದರವು ಈ ಪ್ಯಾಕೇಜ್ ದರಕ್ಕಿಂತ ಕಡಿಮೆ ಇದ್ದಲ್ಲಿ ಆ ಕಡಿಮೆ ಮೊತ್ತವನ್ನೇ ಮರುಪಾವತಿ ಮಾಡಲಾಗುತ್ತದೆ. ಕರೊನಾ ಚಿಕಿತ್ಸೆಗಾಗಿ ವೈದ್ಯಕೀಯ ಮುಂಗಡ ಪಾವತಿಗೆ ಅವಕಾಶ ನೀಡಿಲ್ಲ. ಕೋವಿಡ್ ಎಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅಥವಾ ಇತರ ಕಾಯಿಲೆಯ ಚಿಕಿತ್ಸೆಗೆಂದು ದಾಖಲಾದ ಬಳಿಕ ಕೋವಿಡ್ ಕಾಣಿಸಿಕೊಂಡು ಸಂದರ್ಭ ಅನಿರೀಕ್ಷಿತ ಕ್ಲಿಷ್ಟಕರ ಚಿಕಿತ್ಸಾ ಸಂದರ್ಭಗಳು, ಶಸ್ತ್ರ ಚಿಕಿತ್ಸೆಗಳು, ಗರ್ಭಿಣಿಯರಿಗೆ ಸಂಬಂಧಿತ ಹಾಗೂ ಇನ್ನಿತರ ಅಸ್ವಸ್ಥ ಪರಿಸ್ಥಿತಿಗಳು ಎದುರಾದಲ್ಲಿ ಸರ್ಕಾರಿ ನೌಕರರಿಗೆ ಅನ್ವಯವಾಗುವ ನಿಯಮಗಳಂತೆ ಮರುಪಾವತಿಸಬಹುದಾದ ವೆಚ್ಚದ ಅರ್ಹತಾದಾಯಕ ಮೊತ್ತವನ್ನು ಎಸ್​ಎಎಸ್​ಟಿ ಸಂಸ್ಥೆಯಿಂದ ಪಡೆದು ಮರು ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net