

ನವದೆಹಲಿ: 2002ರಲ್ಲಿ ನಡೆದ ಗುಜರಾತ್ ಗಲಭೆ ಪ್ರಕರಣದ 17 ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ.
ಅಪರಾಧಿಗಳನ್ನು ಇಂದೋರ್ ಹಾಗೂ ಜಬಲ್ಪುರ್ ಎರಡು ಗುಂಪುಗಳಾಗಿ ಮಾಡಿದ್ದು, ಗುಜರಾತ್ ರಾಜ್ಯವನ್ನು ಪ್ರವೇಶಿಸುವಂತಿಲ್ಲ ಹಾಗೂ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಹೇಳಿ ಜಾಮೀನು ನೀಡಿದೆ.
ಇದಕ್ಕೂ ಮುನ್ನ ಅಪರಾಧಿಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆ ಮಾಡುವುದರ ಕುರಿತು ಖಚಿತಪಡಿಸುವಂತೆ ಮಧ್ಯಪ್ರದೇಶದ ಇಂದೋರ್ ಮತ್ತು ಜಬಲ್ಪುರ್ನ ಜಿಲ್ಲಾ ಕಾನೂನು ಅಧಿಕಾರಿಗಳು ನ್ಯಾಯಾಲಯವನ್ನು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ, ಅಪರಾಧಿಗಳು ಜೀವನೋಪಾಯಕ್ಕೆ ಕೆಲಸ ಹುಡುಕಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಅಪರಾಧಿಗಳ ನಡತೆಯ ಮೇಲೆ ಅನುಸರಣಾ ವರದಿಯನ್ನು ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಕೇಳಿದೆ.
ಫೆ.27, 2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ ಸಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಬಿದ್ದು ಹಿಂದು ಪ್ರಯಾಣಿಕರು ಸಾವಿಗೀಡಾಗಿದ್ದರು. ಇದಾದ ಬಳಿಕ ಸರ್ದಾರ್ಪುರ್ ಗ್ರಾಮದಲ್ಲಿ ಉಂಟಾದ ಗಲಭೆಯಲ್ಲಿ 33 ಮುಸ್ಲೀಮರನ್ನು ಹತ್ಯೆ ಮಾಡಲಾಗಿತ್ತು. (ಏಜೆನ್ಸೀಸ್)