17.15 ಲಕ್ಷ ರೂ. ಆನ್‌ಲೈನ್ ವಂಚನೆ

Crime Logo
Published on

ಆನ್‌ಲೈನ್ ವಂಚನೆಗೆ ಒಳಗಾಗಿರುವ ವ್ಯಕ್ತಿಯೊಬ್ಬರು 17.15 ಲಕ್ಷ ರೂ. ಕಳೆದುಕೊಂಡಿದ್ದಾರೆ. ನಗರದ ಬೋಗಾದಿ ನಿವಾಸಿ ಹಣ ಕಳೆದುಕೊಂಡವರು.

ಟೆಲಿಗ್ರಾಂ ಮೂಲಕ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ ವಂಚಕನ ಮಾತನ್ನು ನಂಬಿ ವಿವಿಧ ಹಂತಗಳಲ್ಲಿ 17.15 ಲಕ್ಷ ರೂ. ಹೂಡಿದ್ದಾರೆ. ಲಾಭದೊಂದಿಗೆ ಹಣ ವಾಪಸ್ ಬಾರದೇ ಇದ್ದಾಗ ಮೋಸವಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net