1500 ಪೊಲೀಸ್ ಹುದ್ದೆ ನೇಮಕ

police
Published on

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಕೆಎಸ್​ಆರ್​ಪಿ, ಆರ್​ಪಿಸಿ ವಿಭಾಗದಲ್ಲಿ ಖಾಲಿ ಇರುವ 1500 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ.

2023-24ನೇ ಸಾಲಿನಲ್ಲಿ ಕೆಎಸ್​ಆರ್​ಪಿ, ಆರ್​ಪಿಸಿ (ಪುರುಷ, ಮಹಿಳೆ) 1500 ಹುದ್ದೆಗಳ ನೇಮ ಕಾತಿ ನಡೆಯುತ್ತಿದೆ. ಇದರಲ್ಲಿ ಕ್ರೀಡಾ ಪಟುಗಳಿಗೆ ಶೇ. 2, ಕಲ್ಯಾಣ ಕರ್ನಾ ಟಕೇತರ ಒಟ್ಟು 30 ಹುದ್ದೆಗಳು, ಸಿಆರ್​ಪಿಸಿ ಕಲ್ಯಾಣ ಕರ್ನಾಟಕ 614 ಹುದ್ದೆಗಳಲ್ಲಿ 12 ಹುದ್ದೆಗಳು ಕ್ರೀಡಾಪಟುಗಳಿಗೆ ಶೇ.2ರಂತೆ ಮೀಸಲಿರಿಸಲಾಗಿದೆ.

ಇನ್ನುಳಿದ 1470 ಆರ್​ಪಿಸಿ ಕಲ್ಯಾಣ ಕರ್ನಾ ಟಕೇತರ ಮತ್ತು ಕಲ್ಯಾಣ ಕರ್ನಾಟಕ 602 ಆರ್​ಪಿಸಿ ಹುದ್ದೆಗಳಿಗೆ ನೇರ ಮತ್ತು ಸಮತಲ ವರ್ಗೀಕರಣವನ್ನು ಸರ್ಕಾರ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net