15 ರಿಂದ ನಗರದಲ್ಲಿ ನೃತ್ಯೋತ್ಸವ

Dance
Published on

ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ನ.15 ರಿಂದ 24ರವರೆಗೆ ನೃತ್ಯೋತ್ಸವ ಆಯೋಜಿಸಲಾಗಿದೆ ಎಂದು ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ಸಂಯೋಜಕಿ ಡಾ.ಭುವನೇಶ್ವರಿ ತಿಳಿಸಿದರು.

ವಸುಂಧರಾ ದೊರೆಸ್ವಾಮಿ ನೃತ್ಯ ಕ್ಷೇತ್ರಕ್ಕೆ ಕಳೆದ 50 ವರ್ಷಗಳಿಂದ ನೀಡಿರುವ ಕೊಡುಗೆ ನೆನಪು ಹಾಗೂ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಕಲಾವಿದರ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳ ಹಬ್ಬವಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.15ರ ಸಂಜೆ 5.30ಕ್ಕೆ ಸರಸ್ವತಿಪುರಂ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ವಸುಂಧರ ಭವನದಲ್ಲಿನ ಕಲಾಂಧಿತಕ ಅಕಾಡೆಮಿ ಆಫ್ ಆರ್ಟ್ಸ್‌ನಲ್ಲಿ ಜಿಎಸ್‌ಎಸ್‌ಎಸ್ ಐಇಟಿಡಬ್ಲೂೃ ಆಡಳಿತಾಧಿಕಾರಿ ಅನುಪಮಾ ಬಿ. ಪಂಡಿತ್ ಉದ್ಘಾಟಿಸುವರು. ಉದ್ಯಮಿ ಡಾ.ಎಂ.ಜಗನ್ನಾಥ ಶೆಣೈ, ಸಾಹಿತಿ ಕೆ.ಸಿ.ಶಿವಪ್ಪ ಅತಿಥಿಗಳಾಗಿದ್ದು, ಕಲಾವಿದೆ ಶುಭ ಧನಂಜಯ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ವಸುಂಧರಾ ದೊರೆಸ್ವಾಮಿ ಅವರ ನೃತ್ಯ ಪಯಣದ ವ್ಯಕ್ತಿ ಚಿತ್ರಣದ ಪುಸ್ತಕ ಬಿಡುಗಡೆ ಮಾಡಲಾಗುವುದು ತಿಳಿಸಿದರು.

ಕೊನೆಯ ದಿನವಾದ ನ.24 ರಂದು ಬೆಳಗ್ಗೆ 9.30ಕ್ಕೆ ಮೈಸೂರು ಕಲಾ ದಿವಸ್ ಅಂಗವಾಗಿ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಸುಮಾರು 550ಕ್ಕೂ ಹೆಚ್ಚು ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ.ಮೋಹನ್ ಆಳ್ವ, ಡಾ.ಎಂ.ಜಗನ್ನಾಥ ಶೆಣೈ ಅತಿಥಿಗಳಾಗಿರುವರು. ಡಾ.ಸಂಧ್ಯಾ ಪುರೇಚಾ ಅಧ್ಯಕ್ಷತೆ ವಹಿಸುವರೆಂದರು. ಸುದ್ದಿಗೋಷ್ಠಿಯಲ್ಲಿ ಎಂ.ಪಿ.ವಿದ್ಯಾರಾಣಿ, ಶುಭದಾ ಸುಬ್ರಹ್ಮಣ್ಯಂ, ಹರೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net