ಬರೋಬ್ಬರಿ 149 ಪದವಿಗಳ ಸರದಾರ ಸುದರ್ಶನ್!

kala surarshana reddy
Published on

ಬಳ್ಳಾರಿ: ಸಾಮಾನ್ಯವಾಗಿ ಮನೆಬಾಗಿಲ ಮುಂದೆ ಮಾಲೀಕರ ಹೆಸರಿನ ಜತೆ ವೃತ್ತಿ ಬೋರ್ಡ್ ನೇತಾಡುತ್ತಿರುತ್ತದೆ. ಆದರೆ, ನಗರದ ತಾಳೂರು ರಸ್ತೆಯ 10ನೇ ಕ್ರಾಸ್​ನಲ್ಲಿರುವ ಸರಸ್ವತಿ ನಿಲಯದ ಮಾಲೀಕ ಎಂ.ಸುದರ್ಶನ್ ರೆಡ್ಡಿ ಹೆಸರಿನ ಜತೆ ಬರೋಬ್ಬರಿ ಅವರು ಓದಿರುವ 149 ಕೋರ್ಸ್​ಗಳ ಪಟ್ಟಿ ಕಾಣಸಿಗುತ್ತದೆ!

36 ವರ್ಷಗಳಲ್ಲಿ ರೆಡ್ಡಿ ದೂರಶಿಕ್ಷಣದ ಮೂಲಕ 21 ವಿವಿಗಳಲ್ಲಿ 27 ಪದವಿ, 36 ಎಂ.ಎಸ್ಸಿ, 11 ಎಂಬಿಎ, 09 ಎಂಕಾಮ್ 06 ಎಲ್​ಸಿಎಂ, 06 ಶಿಕ್ಷಣ ಮತ್ತು 54 ಎಂಎ ಸ್ನಾತಕೋತ್ತರ ಪೂರೈಸುವುದರ ಜತಗೆ ಹೊಸ ಪದವಿಗಳ ಪರೀಕ್ಷೆಗೂ ತಯಾರಿಸಿದ್ದಾರೆ. 58ರ ಪ್ರಾಯದ ಇವರು, ವಕೀಲ ವೃತ್ತಿ ಮಾಡುತ್ತಿದ್ದಾರೆ. ಇದನ್ನೂ ಓದಿರಿ ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

1984ರಿಂದ ಶ್ರೀ ವೆಂಕಟೇಶ್ವರ, ಅಲಗಪ್ಪ, ಅಂಬೇಡ್ಕರ್ ವಿವಿಗಳಿಂದ ಒಂದೊಂದೆ ಪದವಿಗಳನ್ನು ದೂರಶಿಕ್ಷಣದ ಮೂಲಕ ಪೂರೈಸಿದ್ದಾರೆ. ಮತ್ತೆ 1992ರಿಂದ ಗುಲ್ಬರ್ಗಾ, ಕುವೆಂಪು, ಕಾಕತಿಯ, ಕೆಯುಡಿ, ಬೆಂಗಳೂರು, ಅಚಾರ್ಯ, ನಾಗರ್ಜುನ, ಕೃಷ್ಣದೇವರಾಯ ಮೊದಲಾದ 21 ವಿವಿಗಳಿಂದ 149 ಕೋರ್ಸ್​ಗಳನ್ನು ಪೂರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net