ಮಾರ್ಚ್​ನಲ್ಲಿ 14 ದಿನ ಬ್ಯಾಂಕ್ ರಜಾ

BANK MAIN
Published on

ನವದೆಹಲಿ: ರಾಷ್ಟ್ರೀಯ ರಜಾ ದಿನಗಳು, ಪ್ರಮುಖ ಹಬ್ಬಗಳು, ಸ್ಥಳೀಯ ರಜೆ ಹಾಗೂ ಭಾನುವಾರಗಳು ಸೇರಿ ಬ್ಯಾಂಕುಗಳು ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ 14 ದಿನ ರಜೆ ಇರುತ್ತವೆ.

ಮಾ.10ಕ್ಕೆ ಹೋಳಿ ಹಬ್ಬದ ನಿಮಿತ್ತ ದೇಶದ ಭಾಗಶಃ ಬ್ಯಾಂಕುಗಳು ಬಂದ್ ಇರಲಿದ್ದು, ಕೆಲವೆಡೆ ಎರಡು ಹಾಗೂ ಮೂರು ದಿನಗಳ ಕಾಲವೂ ರಜೆ ನೀಡಲಾಗಿದೆ. ಮಾರ್ಚ್​ನಲ್ಲಿ ಒಟ್ಟು 8 ರಾಷ್ಟ್ರೀಯ ರಜಾ ದಿನಗಳಿದ್ದು, ಕೆಲ ಹಬ್ಬಗಳ ನಿಮಿತ್ತ ಐದು ಸ್ಥಳೀಯ ರಜಾ ದಿನಗಳಿವೆ. ಹೀಗಾಗಿ ಮಾರ್ಚ್​ನ 31 ದಿನಗಳಲ್ಲಿ ಬ್ಯಾಂಕುಗಳು 18 ದಿನ ಮಾತ್ರ ಕಾರ್ಯ ನಿರ್ವಹಿಸಲಿವೆ.

ಹೋಳಿ ಹಿನ್ನೆಲೆ ಮಾ.9 ರಂದು ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್​ಗಳು ರಜೆ ಇರಲಿವೆ. ಯುಗಾದಿ ಹಬ್ಬಕ್ಕಾಗಿ ಮಾ. 25ರಂದು ಆಂಧ್ರ, ಕರ್ನಾಟಕ, ಲಡಾಖ್, ಮಹಾರಾಷ್ಟ್ರ, ಮಣಿಪುರ, ತಮಿಳುನಾಡು, ತೆಲಂಗಾಣ, ಗೋವಾ ಹಾಗೂ ಜಮ್ಮು-ಕಾಶ್ಮೀರದಲ್ಲಿ ಬ್ಯಾಂಕ್​ಗಳು ಬಾಗಿಲು ಮುಚ್ಚಿರುತ್ತವೆ. ಇನ್ನುಳಿದಂತೆ ಸ್ಥಳೀಯ ರಜಾದಿನಗಳಿಗೆ ಅನುಗುಣವಾಗಿ ಕೆಲ ರಾಜ್ಯಗಳಲ್ಲಿ ಬ್ಯಾಂಕ್​ಗಳು ರಜೆ ಇರಲಿವೆ.

ರಜಾ ಪಟ್ಟಿ

  • ಮಾರ್ಚ್​.1-ಭಾನುವಾರ
  • ಮಾರ್ಚ್.8-ಭಾನುವಾರ
  • ಮಾರ್ಚ್.9 ಮತ್ತು 10 ಹೋಳಿ ಹಬ್ಬ
  • ಮಾರ್ಚ್.11, 12 ಮತ್ತು 13ಕ್ಕೆ ಬ್ಯಾಂಕ್ ನೌಕರರ ಪ್ರತಿಭಟನೆ
  • ಮಾರ್ಚ್.14- 2ನೇ ಶನಿವಾರ
  • ಮಾರ್ಚ್.15- ಭಾನುವಾರ
  • ಮಾರ್ಚ್.22-ಭಾನುವಾರ
  • ಮಾರ್ಚ್.25-ಯುಗಾದಿ ಹಬ್ಬ
  • ಮಾರ್ಚ್.28- 4ನೇ ಶನಿವಾರ
  • ಮಾರ್ಚ್.29- ಭಾನುವಾರ
  • ಮಾರ್ಚ್.31- (ಆರ್ಥಿಕ ವರ್ಷ ಮುಕ್ತಾಯ ದಿನ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net