138 ಚಕ್ರದ ಲಾರಿ ಸಂಚಾರ, ಬಿರುಕುಬಿಟ್ಟ ಹಟ್ಟಿಕೇರಿ-ಪಾಂಡುಪುರ ಸೇತುವೆ

bridge damage in National higway
Published on

ಅಂಕೋಲಾ: ತಾಲೂಕಿನ ರಾ.ಹೆ. 66ರ ಹಟ್ಟಿಕೇರಿ-ಪಾಂಡುಪುರ ಸೇತುವೆಯ ಮೇಲೆ ಶನಿವಾರ ಸಂಜೆ ಭಾರಿ ಗಾತ್ರ ಲಾರಿ ಸಂಚರಿಸಿದ್ದರಿಂದ ಸೇತುವೆ ಬಿರುಕು ಬಿಟ್ಟು ಕುಸಿಯುವ ಹಂತ ತಲುಪಿದೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಉತ್ತರ ಗೋವಾಕ್ಕೆ ವಿದ್ಯುತ್ ಪರಿವರ್ತಕವನ್ನು ಸಾಗಿಸಲು 138 ಚಕ್ರದ ಹೈಡ್ರಾಲಿಕ್ ಎಕ್ಸೆಲ್ ವಾಹನ ಬಳಸಲಾಗಿದೆ. ಇದರ ಒಟ್ಟು ತೂಕ 228 ಮೆಟ್ರಿಕ್ ಟನ್. ಇಂತಹ ಮೂರು ವಾಹನಗಳು ಹಟ್ಟಿಕೇರಿ ಟೋಲ್‌ಗೇಟ್‌ನಿಂದ ಹೊರಟಿದ್ದವು.

ಮೊದಲನೇ ವಾಹನವು ದಾಟುತ್ತಿದ್ದಂತೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಇನ್ನೆರಡು ವಾಹನಗಳ ಚಾಲಕರು ವಾಹನವನ್ನು ಮುಂದೆ ಚಲಾಯಿಸದೆ ಅಲ್ಲಿಯೇ ನಿಲ್ಲಿಸಿ ದೊಡ್ಡ ಪ್ರಮಾಣದಲ್ಲಾಗುವ ಹಾನಿಯನ್ನು ತಪ್ಪಿಸಿದ್ದಾರೆ.

ಪಿಎಸ್‌ಐ ಕುಮಾರ ಸಿ.ಕೆ., ಪ್ರೇಮನಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ, ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಬರುವ ವಾಹನಗಳನ್ನು ತಡೆದು ಪರ್ಯಾಯ ಸಂಚಾರ ಮಾರ್ಗದ ವ್ಯವಸ್ಥೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net