ಗಾಜಿನ ಬಾಟಲಿಯಲ್ಲಿ ಸಿಕ್ತು 132 ವರ್ಷಗಳಷ್ಟು ಹಳೆಯ ಸಂದೇಶ! 132 Year Old Message

132 Year Old Message
Published on

ಸ್ಕಾಟ್ಲೆಂಡ್‌: ( 132 Year Old Message ) ಸಮುದ್ರ ತೀರದಲ್ಲಿರುವ ಲೈಟ್ ಹೌಸ್ ನ ಗೋಡೆಯಲ್ಲಿ 132 ವರ್ಷ ಹಳೆಯದಾದ ಬಾಟಲಿ ಪತ್ತೆಯಾಗಿದೆ. ಅದರಲ್ಲಿ ಒಂದು ಪತ್ರ ಬರೆದಿತ್ತು.. ಲೈಟ್ ಹೌಸ್ ನಿರ್ವಹಣೆ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಗಳು ಅದನ್ನು ಓದಿ ಆಶ್ಚರ್ಯಪಟ್ಟ ಘಟನೆ ಸ್ಕಾಟ್ಲೆಂಡ್‌ನಲ್ಲಿ ಬೆಳಕಿಗೆ ಬಂದಿದೆ.

ಸ್ಕಾಟ್ಲೆಂಡ್‌ನ ಐತಿಹಾಸಿಕ ಲೈಟ್‌ಹೌಸ್‌ನಲ್ಲಿ ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ. ಈ ವೇಳೆ ಎಂಜಿನಿಯರ್‌ಗಳು ಬಾಟಲಿಯಲ್ಲಿ 132 ವರ್ಷಗಳ ಹಳೆಯ ಪತ್ರವನ್ನು ಕಂಡುಕೊಂಡಿದ್ದಾರೆ. ಪತ್ರದಲ್ಲಿ ಬರೆದಿರುವುದನ್ನು ಓದಿದ ಎಂಜಿನಿಯರ್‌ಗಳು ಆಶ್ಚರ್ಯಚಕಿತರಾದರು.

ಲೈಟ್ ಹೌಸ್ ಮಾಲೀಕರು ಆರಂಭದಲ್ಲಿ  ಕಾಗದವನ್ನು ನೋಡಿ ನಿಧಿ ನಕ್ಷೆ ಎಂದು ತಮಾಷೆ ಮಾಡಿದರು. ಆದರೆ ಇದು 1892 ರಲ್ಲಿ ಎಂಜಿನಿಯರ್‌ಗಳು ಮತ್ತು ಲೈಟ್‌ಹೌಸ್ ಕೀಪರ್‌ಗಳು ಕ್ವಿಲ್ ಶಾಯಿಯಲ್ಲಿ ಬರೆದ ಸಂದೇಶ ಎಂದು ಅವರು ನಂತರ ಅರಿತುಕೊಂಡರು.

ವರದಿಯ ಪ್ರಕಾರ, 36 ವರ್ಷದ ಎಂಜಿನಿಯರ್ ರಾಸ್ ರಸ್ಸೆಲ್ ಈ ಅದ್ಭುತ ಆವಿಷ್ಕಾರದ ಬಗ್ಗೆ ಹೇಳಿದ್ದಾರೆ.  ರಸ್ಸೆಲ್ ಮತ್ತು ಅವರ ತಂಡವು ಕಿರ್ಕ್‌ಕಾಲ್ಮ್‌ನಲ್ಲಿರುವ ಕಾರ್ನ್‌ವಾಲ್ ಲೈಟ್‌ಹೌಸ್‌ನ ಮರುಸ್ಥಾಪನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಂತರ ಅವರು ಲೈಟ್ ಹೌಸ್ ಗೋಡೆಯಲ್ಲಿ ಬಾಟಲಿಯನ್ನು ಗುರುತಿಸುತ್ತಾರೆ. ಈ ಲೈಟ್ ಹೌಸ್ ಅನ್ನು 1817 ರಲ್ಲಿ ನಿರ್ಮಿಸಲಾಗಿತ್ತು ಎಂದು ಈ ಪತ್ರದ ಮೂಲಕ ತಿಳಿದು ಕೊಂಡಿದ್ದಾರೆ.

ಸೆಪ್ಟೆಂಬರ್ 1892 ರಲ್ಲಿ ಬರೆದ ಈ ಪತ್ರದ ಪ್ರಕಾರ: ಲ್ಯಾಂಟರ್ನ್ ಅನ್ನು ಜೇಮ್ಸ್ ವೆಲ್ಸ್ ಇಂಜಿನಿಯರ್, ಜಾನ್ ವೆಸ್ಟ್‌ವುಡ್ ಮಿಲ್‌ರೈಟ್, ಜೇಮ್ಸ್ ಬ್ರಾಡಿ ಇಂಜಿನಿಯರ್, ಡೇವಿಡ್ ಸ್ಕಾಟ್ ಲೇಬರ್, ಜೇಮ್ಸ್ ಮಿಲ್ನೆ ಮತ್ತು ಸನ್ ಇಂಜಿನಿಯರ್ಸ್, ಮಿಲ್ಟನ್ ಹೌಸ್ ವರ್ಕ್ಸ್, ಎಡಿನ್‌ಬರ್ಗ್‌ನ ಸಂಸ್ಥೆ ತಯಾರಿಸಿದೆ. ಇದನ್ನು ಮೇ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಸ್ಥಾಪಿಸಲಾಗಿದೆ. 15ನೇ ಸೆಪ್ಟೆಂಬರ್ 1892 ಗುರುವಾರ ರಾತ್ರಿ ಇದನ್ನು ಬರೆಯಲಾಗಿದೆ ಎನ್ನಲಾಗಿದೆ.

ಈ ಸಮಯದಲ್ಲಿ   ಜಾನ್ ವಿಲ್ಸನ್ ಪ್ರಿನ್ಸಿಪಾಲ್, ಜಾನ್ ಬಿ ಹೆಂಡರ್ಸನ್ 1 ನೇ ಸಹಾಯಕ, ಜಾನ್ ಲಾಕ್‌ಹಾರ್ಟ್ 2 ನೇ ಸಹಾಯಕರಾಗಿದ್ದರು. ಲೆನ್ಸ್ ಮತ್ತು ಯಂತ್ರವನ್ನು ಜೇಮ್ಸ್ ಡವ್ & ಕೋ ಇಂಜಿನಿಯರ್ಸ್ ಗ್ರೀನ್‌ಸೈಡ್ ಎಡಿನ್‌ಬರ್ಗ್‌ನಿಂದ ಸರಬರಾಜು ಮಾಡಲಾಯಿತು ಮತ್ತು ವಿಲಿಯಂ ಬರ್ನೆಸ್, ಜಾನ್ ಹ್ಯಾರೋವರ್, ಜೇಮ್ಸ್ ಡಾಡ್ಸ್ ಎಂಜಿನಿಯರ್‌ಗಳು ನಿರ್ಮಿಸಿದರು ಎಂದು ಬರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net