

ಬೇಸಿಗೆ ರಜೆ ಮುಗಿದು ಈಗಾಗಲೇ ಶಾಲೆಗಳು ಆರಂಭವಾಗಿ ಎರಡು ತಿಂಗಳಾಗಿವೆ. ಅಲ್ಲದೆ, ಹಾಸ್ಟೆಲ್ಗಳು ಕೂಡ ಪುನಾರಂಭಗೊಂಡಿವೆ. ಆದಾಗ್ಯೂ, ಹಾಸ್ಟೆಲ್ಗೆ ಹೋದ 3 ದಿನದಲ್ಲೇ 13ರ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ತಾನದ ಬಾರ್ಮರ್ನಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಧಾರುಡ ಗ್ರಾಮದ ವಿದ್ಯಾರ್ಥಿನಿ ಧರ್ಮಿ(13)ಮೃತೆ. ಎರಡು ದಿನಗಳ ಹಿಂದೆ ಅವಳನ್ನು ಚೋಹ್ತಾನ್‌ನ ಕಸ್ತೂರ್ಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಸೇರಿಸಲಾಗಿದೆ. ಆದರೆ, ಈ ಹೊಸ ಸ್ಥಳ ಅವಳಿಗೆ ಸರಿಹೊಂದಿಲ್ಲ. ಕುಟುಂಬದಿಂದ ದೂರವಿರುವ ಈ ವಾತಾವರಣ ಅವಳಿಗೆ ಅನಾನುಕೂಲಕರವಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದ ಘಟನೆ ಏನು?
ಮಂಗಳವಾರ ಬೆಳಗ್ಗೆ ಎಂದಿನಂತೆ ಹಾಸ್ಟೆಲ್ನಿಂದ 50 ಹೆಜ್ಜೆ ದೂರದಲ್ಲಿರುವ ಸ್ವಾಮಿ ವಿವೇಕಾನಂದ ಶಾಲೆಗೆ ತೆರಳಿದ್ದಾಳೆ. 4 ಕ್ಲಾಸ್ಗಳನ್ನು ಕೇಳಿ, ಮಧ್ಯಾನ ಊಟದ ಸಮಯದಲ್ಲಿ ಹಾಸ್ಟೆಲ್ ತೆರಳಿದ್ದಾಳೆ. ಸಲ್ಪ ಸಮಯದ ನಂತರ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿಗಳ ಕಿರುಚಾಟ ಮತ್ತು ಗದ್ದಲದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಅವಳ ಇಚ್ಛೇಯ ವಿರುದ್ಧವಾಗಿ ಬಲವಂತವಾಗಿ ಹಾಸ್ಟೆಲ್ಗೆ ಸೇರಿಸಲಾಗಿದೆ. ಈ ಹಿನ್ನೆಲೆ ಕುಟುಂಬದಿಂದ ದೂರವಿರುವ ಈ ವಾತಾವರಣ ಅವಳಿಗೆ ಅನಾನುಕೂಲಕರವಾದ ಇಷ್ಟವಾಗಿಲ್ಲ. ಹೀಗಾಗಿ, ತನ್ನ ತಾಯಿ ಸೀರೆಯಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)