೧೨ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಅದ್ದೂರಿ ಪ್ರಾರಂಭ

akka (1)
Published on

ನ್ಯೂಯಾರ್ಕ್: ಅಮೇರಿಕಾದ ವರ್ಜೀನಿಯ ರಾಜ್ಯದಲ್ಲಿರುವ ರಿಚ್ಮೊಂಡ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ೧೨ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಶನಿವಾರ ಅದ್ದೂರಿಯಾಗಿ ಪ್ರಾರಂಭವಾಯಿತು.
ಶ್ರೀಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಮಹಾಸ್ವಾಮೀಜಿ, ವಚನಾನಂದ ಸ್ವಾಮೀಜಿ, ಅಕ್ಕ ಸಂಸ್ಥೆಯ ಅಧ್ಯಕ್ಷ ರವಿ ಬೋರೇಗೌಡ, ಅಕ್ಕ ಸಂಸ್ಥೆಯ ಛೇರ್ಮನ್ ಡಾ.ಅಮರನಾಥ ಗೌಡ, ಸುತ್ತೂರು ಮಠದ ಶ್ರೀದೇಶಿಕೇಂದ್ರ ಸ್ವಾಮಿಗಳು, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ, ಥಟ್ ಅಂತ ಹೇಳಿ ಖ್ಯಾತಿಯ ಡಾಕ್ಟರ್ ನಾ ಸೋಮೇಶ್ವರ ಮುಂತಾದ ಗಣ್ಯರು ದೀಪ ಹಚ್ಚುವ ಮೂಲಕ ಉದ್ಘಾಟನೆ ಮಾಡಿದರು.
ಅಕ್ಕ ಸಂಸ್ಥೆಯು ಸ್ಥಳೀಯ ರಿಚ್ಮೊಂಡ್ ಕನ್ನಡ ಸಂಘ ಮತ್ತು ವಾಷಿಂಗ್ಟನ್‌ನ ಕಾವೇರಿ ಕನ್ನಡ ಸಂಘ ಇವರ ಸಹಯೋಗದಲ್ಲಿ ಈ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸುತ್ತಿದೆ. ಇದರಲ್ಲಿ ದೇಶ ವಿದೇಶಗಳಿಂದ ಆಗಮಿಸಿರುವ ಸುಮಾರು ೫೦೦೦ ಕನ್ನಡಿಗರು ಭಾಗವಹಿಸುತ್ತಿದ್ದಾರೆ.
ಊಟಕ್ಕೆ ಸುಮಾರು ೨೦ ಬಗೆಯ ವಿವಿಧ ರುಚಿಯಾದ ಖಾದ್ಯಗಳನ್ನು ಮಾಡಿದ್ದರು.
ಇಲ್ಲಿಯ ಸ್ಥಳೀಯ ಕನ್ನಡ ಕಲಾವಿದರು ನಿರ್ಮಿಸಿರುವ ಕನ್ನಡ ಭುವನೇಶ್ವರಿಯ, ಮೈಸೂರು ಅರಮನೆ, ಚನ್ನಕೇಶವ ದೇವಸ್ಥಾನದ ಪ್ರತಿಕೃತಿಗಳು (ಟ್ಯಾಬ್ಲೋಗಳು) ಎಲ್ಲರನ್ನು ಆಕರ್ಷಸಿದವು.
ಸ್ಥಳೀಯ ಕನ್ನಡ ಸಂಘಗಳ ನಡೆಸಿ ಕೊಟ್ಟ ಸ್ವಾಗತ ನೃತ್ಯ, ಹುಲಿ ಕುಣಿತ, ಯಕ್ಷಗಾನ ಕುಣಿತ ತುಂಬಾ ಚೆನ್ನಾಗಿದ್ದವು. ಸಂಗೀತ ಸಂಜೆ ಪ್ರೈಮ್ ಟೈಮ್ ಶೋನಲ್ಲಿ ನವೀನ್ ಸಜ್ಜು ಅವರ ತಂಡ ಸಾವಿರಾರು ಜನರನ್ನು ರಂಜಿಸಿತು.
ಈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್, ಮೆರವಣಿಗೆ, ಹರಟೆ ಕಾರ್ಯಕ್ರಮ, ಅಕ್ಕ ಐಡಲ್, ಫ್ಯಾಷನ್ ಶೋ, ಸಾಹಿತ್ಯ ಚರ್ಚೆ ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net