ರಾಜಸ್ತಾನಿ ಬಾಲಕಿಗೆ ಕನ್ನಡದಲ್ಲಿ 125 ಅಂಕ

Disha
Published on

ರಿಪ್ಪನ್‌ಪೇಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜಸ್ಥಾನ ಮೂಲದ ವಿದ್ಯಾರ್ಥಿನಿ ಕನ್ನಡ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸುವ ಮೂಲಕ ಕನ್ನಡಿಗರು ಹುಬ್ಬೇರಿಸುವಂತೆ ಮಾಡಿದ್ದಾಳೆ.

ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿ ದಿಶಾ 625ಕ್ಕೆ 603 ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ರಾಜಸ್ಥಾನ ಮೂಲದ ಜ್ಯುವೆಲ್ಲರಿ ಮಾಲೀಕ ಸುರೇಶ ಮತ್ತು ಸುನೀತ ದಂಪತಿಯ ಪುತ್ರಿ ದಿಶಾ ಸಾಧನೆ ಮಾಡಿದ್ದಾಳೆ.
ವಿದ್ಯಾರ್ಥಿನಿಯ ಪಾಲಕರು ರಾಜಸ್ತಾನದ ಪಾಲಿ ಜಿಲ್ಲೆಯ ಸೋಜತ್ ತಾಲೂಕಿನವರು. 15 ವರ್ಷಗಳ ಹಿಂದೆ ಉದ್ಯೋಗ ಅರಿಸಿಬಂದ ಕುಟುಂಬವು ಪಟ್ಟಣದಲ್ಲಿ ಜ್ಯುವೆಲ್ಲರಿ ಮಳಿಗೆ ಇಟ್ಟುಕೊಂಡು ಜೀವನ ಸಾಗಿಸುತ್ತಿದೆ. ವಿದ್ಯಾರ್ಥಿನಿ ದಿಶಾ ಹಿಂದಿಯಲ್ಲೂ 100ಕ್ಕೆ 100 ಅಂಕ ಗಳಿಸಿದ್ದಾಳೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ದಿಶಾ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಪಿಎಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net