ರಾಜ್ಯದಲ್ಲಿ 1,240 ಕೋವಿಡ್ ಸಕ್ರಿಯ ಕೇಸ್: ಸೋಂಕಿಗೆ ನಾಲ್ಕು ಸಾವು

Covid
Published on

ಬೆಂಗಳೂರು : ರಾಜ್ಯದಲ್ಲಿ ಗುರುವಾರ 229 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,240 ತಲುಪಿದೆ. ಸೋಂಕಿನ ತೀವ್ರತೆಗೆ ನಾಲ್ವರು ಮೃತಪಟ್ಟಿದ್ದು, ಮರಣ ಪ್ರಮಾಣ ದರ ಶೇ. 1.34ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 7,791 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರು ನಗರದಲ್ಲಿ 172 ವರದಿಯಾಗಿವೆ.

ರಾಜ್ಯದಲ್ಲಿ 1,240 ಸೋಂಕಿತರಿದ್ದು, ಇವರಲ್ಲಿ 1,168 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಉಳಿದ 72 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 51 ಮಂದಿ ಸಾಮಾನ್ಯವಾರ್ಡ್‌ನಲ್ಲಿ, 9 ಮಂದಿ ಆಕ್ಸಿನ್ ಬೆಡ್, 9 ಮಂದಿ ತುರ್ತು ನಿಗಾ ಘಟಕ ಹಾಗೂ ಮೂವರು ಐಸಿಯು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿನ ತೀವ್ರತೆಯಿಂದ ಬೆಂಗಳೂರಿನಲ್ಲಿ 82 ವರ್ಷದ ಹಾಗೂ 64 ವರ್ಷದ ವೃದ್ಧರಿಬ್ಬರು ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಂಡಿರಲಿಲ್ಲ. ಮೈಸೂರಿನಲ್ಲಿ 60 ವರ್ಷದ ಮಹಿಳೆ ಹಾಗೂ ಧಾರವಾಡದಲ್ಲಿ 63 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net