1200 ಕೋಟಿ ಕ್ರಿಪ್ಟೊ ವಂಚನೆ; 900 ಜನರಿಗೆ ಮೋಸ, ನಕಲಿ ಕ್ರಿಪ್ಟೊ ಕರೆನ್ಸಿ ಮಾರಾಟ

sdfsdfsdfsdffgn
Published on

ತಿರುವನಂತಪುರ: ನಕಲಿ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿಸಿ 900 ಜನರಿಗೆ ಸುಮಾರು 1200 ಕೋಟಿ ರೂ. ವಂಚನೆ ಮಾಡಿದ ಪ್ರಕರಣ ಕೇರಳದಲ್ಲಿ ಬೆಳಕಿಗೆ ಬಂದಿದೆ. ಜಾರಿ ನಿರ್ದೇಶನಾಲಯ (ಇಡಿ) ಈ ಬಗ್ಗೆ ತನಿಖೆ ಕೈಗೊಂಡಿದೆ.

2020 ಲಾಕ್​ಡೌನ್ ವೇಳೆಯಲ್ಲೇ ಈ ಜಾಲ ಸಕ್ರಿಯವಾಗಿತ್ತು. ಮಾರಿಸ್ ಕಾಯಿನ್ ಹೆಸರಿನ ಕ್ರಿಪ್ಟೊ ಕರೆನ್ಸಿಯನ್ನು ವಂಚಕರು ಜನರಿಗೆ ಮಾರಾಟ ಮಾಡುತ್ತಿದ್ದರು. ಫ್ರಾಂಕ್ ಕ್ರಿಪ್ಟೊ ಎಕ್ಸ್​ಚೇಂಜ್​ನಲ್ಲಿ ಇದನ್ನು ಐಪಿಒ ರೀತಿಯಲ್ಲಿ ಲಿಸ್ಟಿಂಗ್ ಮಾಡಲಾಗಿದೆ ಎಂದು ಜನರನ್ನು ನಂಬಿಸಲಾಗಿತ್ತು. ಆದರೆ ವಾಸ್ತವದಲ್ಲಿ ಇದು ನಕಲಿ ಕ್ರಿಪ್ಟೊ ಕರೆನ್ಸಿಯಾಗಿದ್ದು, ಯಾವುದೇ ಎಕ್ಸ್ ಚೇಂಜ್​ನಲ್ಲಿ ವಹಿವಾಟು ನಡೆಸುತ್ತಿರಲಿಲ್ಲ. 15 ಸಾವಿರ ರೂ.ಗೆ 10 ಕಾಯಿನ್​ನಂತೆ ಮಾರಾಟ ಮಾಡಲಾಗುತ್ತಿತ್ತು. 300 ದಿನಗಳ ಕಾಲ ಇದಕ್ಕೆ ಲಾಕ್​ಇನ್ ಅವಧಿ ನಿಗದಿ ಮಾಡಲಾಗಿತ್ತು. ಈ ಅವಧಿ ಮುಗಿದ ಬಳಿಕ ಬೆಲೆಯಲ್ಲಿ ಭಾರಿ ಏರಿಕೆ ಕಾಣಲಿದೆ ಎಂಬ ಆಮಿಷ ಒಡ್ಡಲಾಗಿತ್ತು.

ಕರ್ನಾಟಕದಲ್ಲಿ ಹೂಡಿಕೆ: ಹೂಡಿಕೆದಾರರಿಂದ ಪಡೆದ ಕೋಟ್ಯಂತರ ರೂ. ಮೊತ್ತವನ್ನು ವಂಚಕರು ಕರ್ನಾಟಕ, ಕೇರಳ, ತಮಿಳುನಾಡಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದರು. ಇದರ ಸುಳಿವು ದೊರೆತ ಹಿನ್ನೆಲೆಯಲ್ಲಿ ಇತ್ತೀಚಿಗೆ ಜಾರಿ ನಿರ್ದೇಶನಾಲಯ ಕರ್ನಾಟಕ ಸಹಿತ 11 ಸ್ಥಳಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಶಾದ್ (31) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈತ ವಂಚನೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ. ಇನ್ನೂ ಅನೇಕರು ಈ ಜಾಲದಲ್ಲಿ ತೊಡಗಿದ್ದ ಶಂಕೆ ಇದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಆರೋಪಿಗಳು ಈ ಹಿಂದೆ ಹಲವಾರು ಪೂಂಜಿ ಸ್ಕೀಮ್ಳಲ್ಲಿ ಜನರಿಗೆ ವಂಚನೆ ಮಾಡಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net