3ವರ್ಷದ ಬಾಲಕಿಯನ್ನು ರೇಪ್​ ಮಾಡಿದ 12ವರ್ಷದ ಹುಡುಗ; ಮಗನೊಂದಿಗೆ ಪರಾರಿಯಾದ ಅಪ್ಪ

Rape 9 11
Published on

ಜಮ್​​ಶೆಡ್​ಪುರ: 12 ವರ್ಷದ ಹುಡುಗನೋರ್ವ ಮೂರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಆತಂಕಕಾರಿ ಘಟನೆ ಜಾರ್ಖಂಡ್​​ನ ಪೂರ್ವ ಸಿಂಗ್​ಭೂಮ್​​ನಲ್ಲಿ ನಡೆದಿದೆ.

ನವೆಂಬರ್​ 4ರಂದೇ ಅತ್ಯಾಚಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದೇ ಶನಿವಾರ ಸಂಜೆ ಎಂದು ತಿಳಿದುಬಂದಿದೆ.

ಈ ಹುಡುಗ ಬಾಲಕಿಯ ಪಕ್ಕದ ಮನೆಯವನೇ ಆಗಿದ್ದಾನೆ. ಅವಳು ಆಡುತ್ತಿದ್ದಾಗ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಸದ್ಯ ಆರೋಪಿ ಬಾಲಕ ತನ್ನ ತಂದೆಯೊಂದಿಗೆ ನಾಪತ್ತೆಯಾಗಿದ್ದಾನೆ. ಇವರಿಬ್ಬರನ್ನೂ ಪೊಲೀಸರು ಹುಡುಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net