

ಪಿರಿಯಾಪಟ್ಟಣ: ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನಕ್ಕೆ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ ಮೈಸೂರಿನ ಬಾಲಕನೊಬ್ಬ ರೂಬಿಕ್ ಕ್ಯೂಬ್ಗಳಲ್ಲಿ ಪ್ರಧಾನಿಗಳ ಭಾವಚಿತ್ರವನ್ನು ಮೂಡಿಸಿರುವುದು ಇದೀಗ ಅನೇಕರ ಗಮನಸೆಳೆದಿದೆ.
ಇದನ್ನೂ ಓದಿ: ಜನಹಿತ ಕಾಪಾಡುವಲ್ಲಿ ವಿಫಲ
ರೂಬಿಕ್ ಕ್ಯೂಬ್ಗಳಲ್ಲಿ ಪ್ರಧಾನಿಗಳ ಭಾವಚಿತ್ರ ಅರಳಿಸಿದ ಬಾಲಕ, ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಬಾಲಕನ ಕೈಚಳಕಕ್ಕೆ ಮನಸೋತ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾವು ಕೂಡ ಪ್ರಧಾನಿಗಳ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ಪ್ರಧಾನಿಗಳ ಭಾವಚಿತ್ರವನ್ನು ರೂಬಿಕ್ ಕ್ಯೂಬ್ನಲ್ಲಿ ಅರಳಿಸಿದ 12 ವರ್ಷದ ಬಾಲಕ ಪ್ರಣವ್, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನವರು ಎಂದು ಹೇಳಲಾಗಿದೆ. 300ಕ್ಕೂ ಅಧಿಕ ಸಂಖ್ಯೆಯ ರೂಬಿಕ್ ಕ್ಯೂಬ್ಗಳನ್ನು ಬಳಸಿ ಭಾವಚಿತ್ರವನ್ನು ನಿರ್ಮಿಸಿದ್ದಾರೆ.