

ಶಿವಮೊಗ್ಗ: ಶಿವಮೊಗ್ಗ ರೌಂಡ್ ಟೇಬಲ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್, ಮಲ್ನಾಡ್ ಮಾಸ್ಟರ್ಸ್‌ನಿಂದ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ನೈಟ್ಸ್ ಇನ್ ಖಾಕಿ ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ 12 ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಮಹಿಳಾ ಪೊಲೀಸ್ ಠಾಣೆಯ ಸಿಪಿಸಿ ಆರ್.ಸಂತೋಷ್, ಕುಂಸಿ ಠಾಣೆಯ ಸಿಪಿಸಿ ಎಚ್.ಆದರ್ಶ, ಶಿವಮೊಗ್ಗ ಪೂರ್ವ ಸಂಚಾರ ಠಾಣೆಯ ಮುಖ್ಯ ಪೇದೆ ಎಸ್.ಕೆ.ಪದ್ಮರಾಜ್, ಭದ್ರಾವತಿ ಹಳೇನಗರದ ಠಾಣೆ ಮುಖ್ಯ ಪೇದೆ ಜಿ.ರಾಘವೇಂದ್ರ, ಶಿಕಾರಿಪುರ ಗ್ರಾಮಾಂತರ ಠಾಣೆ ಮುಖ್ಯ ಪೇದೆ ತಿರುಕಪ್ಪ, ಸಾಗರ ಪಟ್ಟಣ ಠಾಣೆ ಸಿಪಿಸಿ ಕೃಷ್ಣಮೂರ್ತಿ, ಮುಖ್ಯ ಪೇದೆ ಕಿರಣ್‌ಕುಮಾರ್, ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ಮುಖ್ಯ ಪೇದೆ ವೀಣಾ, ಶಿವಮೊಗ್ಗ ಕಂಟ್ರೋಲ್ ರೂಂ(ನಿಸ್ತಂತು) ಮುಖ್ಯಪೇದೆ ಎಲ್.ಜನಾರ್ದನ್, ಶಿವಮೊಗ್ಗ ಫಿಂಗರ್ ಪ್ರಿಂಟ್ ಘಟಕದ ಎಎಸ್‌ಐ ರಮೇಶ್ ನಾಯ್ಕ, ಶಿವಮೊಗ್ಗ ಡಿಎಆರ್‌ನ ಎಪಿಸಿಗಳಾದ ರಾಘವೇಂದ್ರ ಹಾಗೂ ಸಂತೋಷ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಎಂಎಲ್‌ಸಿ ಡಾ. ಧನಂಜಯ್ ಸರ್ಜಿ, ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ, ಎವಿಸಿ ಸುಶ್ರುತ್ ಬೆಳಗೂರ್, ಕೆ.ಪ್ರಶಾಂತ್, ಆದಿತ್ಯ ಆಚಾರ್ಯ, ಎ.ಎಸ್.ರೋಹನ್, ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ನ ಪದಾಧಿಕಾರಿಗಳು, ಕುಟುಂಬ ಸದಸ್ಯರು ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.