ಮದುವೆ ಆಮಿಷವೊಡ್ಡಿ 12.61 ಲಕ್ಷ ವಂಚನೆ

cyber crime
Published on

ಬೆಂಗಳೂರು: ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಯವಾದ ಯುವತಿ, ಮದುವೆ ಆಗುವುದಾಗಿ ನಂಬಿಸಿ ಷೇರು ಮಾರ್ಕೆಟ್‌ನಲ್ಲಿ 12.61 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ಉದ್ಯಮಿಯನ್ನು ವಂಚಿಸಿದ್ದಾಳೆ.

ಜೆ.ಪಿ. ನಗರದ ರಾಘವೇಂದ್ರ ಲೇಔಟ್ ನಿವಾಸಿ ಜಿ. ರಘು ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗ ಸಿಇಎನ್ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜನವರಿ 4ರಂದು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪ್ರಿಯಾಂಕಾ ಎಂಬಾಕೆ ಪರಿಚಯವಾಗಿ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಚಾಟಿಂಗ್ ಶುರು ಮಾಡಿದ್ದರು. ಜ.15ರಂದು ಕರೆ ಮಾಡಲು ಆರಂಭಿಸಿ ಪರಿಸ್ಪರ ಸಂಭಾಷಣೆ ಮಾಡುತ್ತಿದ್ದರು. ಆತ್ಮೀಯವಾಗಿ ಮಾತನಾಡಿಕೊಂಡು ಮದುವೆ ಆಗುವುದಾಗಿ ಹೇಳುತ್ತಿದ್ದ ಪ್ರಿಯಾಂಕಾ, ಕೆಲ ದಿನಗಳ ಬಳಿಕ ‘ಕಷ್ಟಕ್ಕೆ ಸಿಲುಕೊಂಡಿದ್ದೇನೆ. ಆದರಿಂದ ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಳಲು ತೋಡಿಕೊಂಡಿದ್ದಳು. ಅದಕ್ಕೆ ರಘು, ‘ಏನಾಯಿತು’ ಎಂದು ಕೇಳಿದಾಗ ‘ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ಒಳ್ಳೆಯ ಲಾಭ ಗಳಿಸುತ್ತಿದ್ದೇನೆ. ಆದರೆ, ನನ್ನ ಬಳಿ ಸದ್ಯ ಹಣ ಇಲ್ಲ. ನೀವು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆದು ನಂತರ ಮದುವೆ ಮಾಡಿಕೊಳ್ಳೋಣ’ ಎಂದಿದ್ದಳು. ಅದಕ್ಕೆ ರಘು, ‘ನನಗೆ ಷೇರು ಮಾರ್ಕೆಟ್ ಬಗ್ಗೆ ಯಾವುದೇ ಜ್ಞಾನ ಇಲ್ಲ’ವೆಂದು ಹೇಳಿದಾಗ ‘ನೀವು ಹೂಡಿಕೆ ಮಾಡಿ.. ಅದರ ನಿರ್ವಹಣೆ ನಾನು ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದಳು.

ಇದನ್ನು ನಂಬಿದ ರಘು, ಹಂತ ಹಂತವಾಗಿ ಆಕೆಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತ ಬಂದಿದ್ದರು. 12.61 ಲಕ್ಷ ರೂ. ಹೂಡಿಕೆ ಮಾಡಿದ್ದು, ಯಾವುದೇ ಲಾಭಾಂಶವನ್ನು ಕೊಟ್ಟಿಲ್ಲ. ಈ ಬಗ್ಗೆ ಕರೆ ಮಾಡಿ ಪ್ರಶ್ನಿಸಿದಾಗ ಪ್ರಿಯಾಂಕಾ, ೆನ್ ಸ್ವಿಚ್ ಆ್ ಮಾಡಿಕೊಂಡು ಸಂಪರ್ಕ ಕಡಿತ ಮಾಡಿಕೊಂಡಿದ್ದಳು. ನೊಂದ ರಘು, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸೈಬರ್ ಹೆಲ್ಪ್‌ಲೈನ್ 1930ಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net