11ನೇ ತರಗತಿಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ

Application
Published on

 ಜವಹಾರ್ ನವೋದಯ ವಿದ್ಯಾಲಯ, ಡಿ.ಎಂ.ಜಿ.ಹಳ್ಳಿ, ತಾಲ್ಲೂಕು/ಜಿಲ್ಲೆ ಮೈಸೂರು ಇಲ್ಲಿ 2025-26ನೇ ಶೃಕ್ಷಣಿಕ ವರ್ಷದ 11ನೇ ತರಗತಿಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ವಿಜ್ಞಾನ ವಿಭಾಗದಲ್ಲಿ 40 ಸ್ಥಾನಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 40 ಸ್ಥಾನಗಳು ಖಾಲಿ ಇವೆ.

 ಮೈಸೂರು ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ 10ನೇ ತರಗತಿ ಉತ್ತೀರ್ಣರಾಗಿರಬೇಕು, ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಪ್ರವೇಶ ಕ್ರಮವು ಕೇವಲ 2025-26ನೇ ಸಾಲಿಗೆ ಮಾತ್ರ ಅನ್ವಯಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಂಕಪಟ್ಟಿ ನಕಲು, ಆಧಾರ್ ಕಾರ್ಡ್ ನಕಲು, ಎರಡು ಇತ್ತೀಚಿನ ಪಾಸ್ ಪೋರ್ಟ್ ಸೈಸ್ ಫೋಟೋಗಳನ್ನು ಸಲ್ಲಿಸಬೇಕು. ತಕ್ಷಣವೇ ತಮ್ಮ ಶಾಲೆಯ ಮುಖೋಪಾಧ್ಯಾಯರ ಮೂಲಕ ಅಥವಾ ನೇರವಾಗಿ ಜವಹಾರ್ ನವೋದಯ ವಿದ್ಯಾಲಯ, ಡಿ.ಎಂ.ಜಿ.ಹಳ್ಳಿ, ಮೈಸೂರು ಇವರನ್ನು ಸಂಪರ್ಕಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನಾಂಕವಾಗಿರುತ್ತದೆ.

 ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821-2970040 ನ್ನು ಸಂಪರ್ಕಿಸಬಹುದು ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net