11ಕ್ಕೆ ಕಿಗ್ಗಾದಲ್ಲಿ ಕುಂಭಾಭಿಷೇಕ

7sri-2 temle
ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ದೇವಾಲಯದಲ್ಲಿರುವ ಶಾಂತಾದೇವಿ.
Published on

ಶೃಂಗೇರಿ: ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದ ಶ್ರೀ ಶಾಂತಾ ದೇಗುಲಕ್ಕೆ ಪ್ರತಿಷ್ಠಾಪನಾ ಶತಮಾನೋತ್ಸವ ಸಂಭ್ರಮ. ಶ್ರೀ ಶಾರದಾಪೀಠದ ಜಗದ್ಗುರುಗಳ ಅಪ್ಪಣೆಯಂತೆ ಮೇ 11ರಂದು ಕುಂಭಾಭಿಷೇಕ ನಡೆಯಲಿದೆ.

ಕುಂಭಾಭಿಷೇಕದ ಅಂಗವಾಗಿ ದೇವಾಲಯದಲ್ಲಿ ಜಗತ್ ಕಲ್ಯಾಣಕ್ಕಾಗಿ ಮೇ 7ರಿಂದ 12ರವರೆಗೆ ಕುಂಭಾಭಿಷೇಕ, ಸಹಸ್ರ ಚಂಡಿಕಾಹೋಮ, ಮಹಾರುದ್ರ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜಗದ್ಗುರುಗಳ ನಿರ್ದೇಶನದಂತೆ ವಿಘ್ನ ನಿವಾರಕ ಗಣೇಶನ ಪೂಜೆಯೊಂದಿಗೆ ಆರಂಭಗೊಳ್ಳಲಿದೆ. 11ರಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕುಂಭಾಭಿಷೇಕ ನೆರವೇರಿಸುವರು. 12ರಂದು ಸಹಸ್ರ ಚಂಡಿಕಾ ಹೋಮದ ಪೂರ್ಣಾಹುತಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net