

ಕಾನ್ಪುರ: ಹನ್ನೊಂದನೇ ತರಗತಿಯ ಬಾಲಕನೊಬ್ಬ ಕನಸಿನಲ್ಲಿ ಕೆಲವರು ಬಂದು ಹೆದರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಪ್ರದೇಶದ ಕಾನ್ಪುರದ ಪುರಾನಾ ಕಾನ್ಪುರ ಪ್ರದೇಶದ ನಿವಾಸಿ 11 ನೇ ತರಗತಿಯ ಆರವ್ ಮಿಶ್ರಾ (16) ಆತ್ಮಹತ್ಯೆ ಮಾಡಿಕೊಂಡ ಬಾಲಕ.
ಛತ್ ಪೂಜೆ ಹಿನ್ನೆಲೆಯಲ್ಲಿ ಆತನ ಪಾಲಕರು ಭಾಗಲ್ಪುರಕ್ಕೆ ತೆರಳಿದ್ದರು. ‘ಕನಸಿನಲ್ಲಿ ಮೂರರಿಂದ ನಾಲ್ಕು ಜನರು ಬಂದು ನಿನ್ನ ಕುಟುಂಬಕ್ಕೆ ಹಾನಿ ಉಂಟುಮಾಡು ಅಥವಾ ನಿನ್ನ ಪ್ರಾಣ ತೆಗೆದುಕೋ ಎಂದು ಒತ್ತಾಯಿಸುತ್ತಿದ್ದರು. ಬಹಳ ಸಮಯದಿಂದ ನಾನು ತೊಂದರೆಗೆ ಒಳಗಾಗಿದ್ದೆ. ಹಾಗಾಗಿ ಸಾವನ್ನಪು್ಪತ್ತಿದ್ದೇನೆ’ ಎಂದು ಆತ ಡೆತ್ ನೋಟ್ ನಲ್ಲಿ ತಿಳಿಸಿದ್ದಾನೆ. ಅರವ್ ಮಿಶ್ರಾ ತಂದೆ ಅಲೋಕ್ ಮಿಶ್ರಾ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಸೋದರಳಿಯ ಎಂದು ತಿಳಿದು ಬಂದಿದೆ.