11 ದಿನದಲ್ಲಿ 49 ಸಾವಿರ ಮಂದಿ ಸೋಂಕು ಮುಕ್ತ : 1,621 ಹೊಸ ಪ್ರಕರಣ, 17 ಸಾವು

corona images
Published on

ಬೆಂಗಳೂರು : ನಗರದಲ್ಲಿ ಕಳೆದ 11 ದಿನಗಳಲ್ಲಿ (ಅ.21 ರಿಂದ ಅ.31) 49,561 ಮಂದಿ ಕರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದೇ ಅವಧಿಯಲ್ಲಿ ಕೇವಲ 20,910 ಮಂದಿ ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಈಗಾಗಲೇ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಸತತ 11ನೇ ದಿನ ಇಳಿಮುಖವಾಗುತ್ತಿದೆ. ಶನಿವಾರ 4,679 ಮಂದಿ ಸೋಂಕು ಮುಕ್ತರಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,98,145ಕ್ಕೆ ಏರಿಕೆಯಾಗಿದ್ದು, ಇನ್ನೊಂದು ದಿನದಲ್ಲಿ ಗುಣಮುಖರ ಸಂಖ್ಯೆ 3 ಲಕ್ಷ ಗಡಿ ದಾಟುವ ಸಾಧ್ಯತೆಯಿದೆ. ಇನ್ನು ಹೊಸದಾಗಿ 1,621 ಕರೊನಾ ಸೋಂಕಿತರು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,36,469ಕ್ಕೆ ತಲುಪಿದೆ. ಒಂದೇ ದಿನ 17 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 3,864ಕ್ಕೆ ಏರಿಕೆಯಾಗಿದೆ.

ಗಂಭೀರವಾಗುತ್ತಿದೆ ಐಸಿಯು ಚಿಕಿತ್ಸೆ: ಕಳೆದ ಅ.8 ರಿಂದ ಅ.21ರವರೆಗೆ ಕರೊನಾ ನಿಗದಿತ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರ ಮತ್ತು ಮನೆ ನಿಗಾದಲ್ಲಿರುವ ಸಕ್ರಿಯ ಪ್ರಕರಣ ಸಂಖ್ಯೆ 60 ಸಾವಿರಕ್ಕಿಂತಲೂ ಅಧಿಕವಾಗಿತ್ತು. ಈ ವೇಳೆ 400ಕ್ಕಿಂತ ಕಡಿಮೆ ಸೋಂಕಿತರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕಳೆದ 10 ದಿನಗಳಿಂದ ಗುಣಮುಖರ ಸಂಖ್ಯೆ ಹೆಚ್ಚಾಗಿದ್ದರಿಂದ ಶನಿವಾರದ ಅಂತ್ಯಕ್ಕೆ ಸಕ್ರಿಯ ಪ್ರಕರಣ ಸಂಖ್ಯೆ 34,459ಕ್ಕೆ ಇಳಿಕೆಯಾಗಿದೆ. ಆದರೆ, ಐಸಿಯು ಚಿಕಿತ್ಸೆ ಪಡೆಯುವವರ ಸಂಖ್ಯೆ 461ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net