

ರಾಜಸ್ಥಾನ: ಬಾಂದ್ರಾ-ಜೋಧ್ಪುರ ಸೂರ್ಯನಗರಿ ಎಕ್ಸ್ಪ್ರೆಸ್ ರೈಲಿನ 8 ಬೋಗಿಗಳು ರಾಜಸ್ಥಾನದ ಪಾಲಿಯಲ್ಲಿ ಇಂದು(ಸೋಮವಾರ) ಮುಂಜಾನೆ ಅಳಿತಪ್ಪಿದೆ.
ರೈಲು ಅಪಘಾತದಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬಾಂದ್ರಾ ಟರ್ಮಿನಲ್ನಿಂದ ಹೊರಟ ರೈಲು ಜೋಧ್‌ಪುರಕ್ಕೆ ತೆರಳುತ್ತಿತ್ತು. ಮುಂಜಾನೆ 3.27ರ ಸುಮಾರಿನಲ್ಲಿ ಮಾರ್ಗಮಧ್ಯೆ 8 ಬೋಗಿಗಳು ಹಳಿತಪ್ಪಿದ್ದು, ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಆತಂಕಗೊಂಡಿದ್ದರು. ಅದೃಷ್ಟವಶಾತ್ ಪ್ರಾಥಮಿಕ ಮಾಹಿತಿ ಪ್ರಕಾರ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ರಯಾಣಿಕರ ಮಾಹಿತಿಗಾಗಿ ರೈಲ್ವೆ ಇಲಾಖೆಯು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಪ್ರಯಾಣಿಕರ ಬಗ್ಗೆ ವಿಚಾರಿಸಲು ಇಚ್ಛಿಸುವವರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಜೋಧಪುರ: 0291- 2654979(1072), 0291- 2654993(1072), 0291- 2624125, 0291- 2431646
ಪಾಲಿ: 0293-2250324, ಇನ್ನಿತರೆ ಮಾಹಿತಿಗಾಗಿ 138, 1072