10ರಂದು ಬೆಕ್ಕಿನ ಕಲ್ಮಠದಲ್ಲಿ ಬಸವೇಶ್ವರ ಜಯಂತಿ

basaveshwara samiti press meet
ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿದರು. ಶಾಂತಾ ಆನಂದ್, ಕೆ.ಎಸ್.ತಾರಾನಾಥ್, ಬಳ್ಳಕೆರೆ ಸಂತೋಷ್, ಅನಿತಾ ರವಿಶಂಕರ್, ಡಾ. ರೇಣುಕಾರಾಧ್ಯ, ಟಿ.ರುದ್ರೇಶ್, ಮಹೇಶ್‌ಮೂರ್ತಿ, ಜಿ.ಆರ್.ರತ್ನಾ, ಮಂಜುನಾಥ್, ಕೆ.ಸಿ.ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ: ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದಿಂದ ವಿಶ್ವಮಾನವ, ಮಹಾನ್ ಮಾನವತಾವಾದಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಮೇ 10ರಂದು ಸಂಜೆ 6ಕ್ಕೆ ಬೆಕ್ಕಿನ ಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ತಿಳಿಸಿದರು.

ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಇರುವಕ್ಕಿಯ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಗದೀಶ್ ಜಯಂತಿ ಉದ್ಘಾಟಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಗಾಯಿತ್ರಿದೇವಿ ಸಜ್ಜನ್ ಮುಖ್ಯ ಅತಿಥಿಯಾಗಿದ್ದು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಕೆ.ವಿ.ಜ್ಯೋತಿಕುಮಾರಿ ಉಪನ್ಯಾಸ ನೀಡುವರು. ಸುಮಾ ಹೆಗಡೆ ಮತ್ತು ತಂಡದವರಿಂದ ವಚನ ಗಾಯನವಿದೆ ಎಂದರು.
ಸಂಘದ ಗೌರವ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ಬಸವಣ್ಣನವರ ತತ್ವ ಮತ್ತು ಆದರ್ಶಗಳನ್ನು ಎಲ್ಲ ಸಮಾಜದವರು ಪಾಲಿಸುತ್ತಿದ್ದು, ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷೆ ಶಾಂತಾ ಆನಂದ್, ಖಜಾಂಚಿ ಕೆ.ಎಸ್.ತಾರಾನಾಥ್, ಸಹ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ನಿರ್ದೇಶಕರಾದ ಅನಿತಾ ರವಿಶಂಕರ್, ಡಾ. ರೇಣುಕಾರಾಧ್ಯ, ಟಿ.ರುದ್ರೇಶ್, ಮಹೇಶ್‌ಮೂರ್ತಿ, ಜಿ.ಆರ್.ರತ್ನಾ, ಮಂಜುನಾಥ್, ಕೆ.ಸಿ.ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net