ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಗೆ 10 ಸಾವಿರ ಮುಂಗಡ ಹಣ

Pay Card
Published on

ಗಾಂಧಿನಗರ: ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ 10 ಸಾವಿರ ರೂ. ಮುಂಗಡ ಹಣ ನೀಡುವುದಾಗಿ ಘೋಷಿಸಿತ್ತು. ಇದೀಗ ರಾಜ್ಯ ಸರ್ಕಾರ ಕೂಡ ಅದೇ ಹಾದಿಯಲ್ಲಿ ಸಾಗಿದ್ದು, ರಾಜ್ಯ ಸರ್ಕಾರಿ ನೌಕರರಿಗೆ 10 ಸಾವಿರ ರೂ. ಮುಂಗಡ ಹಣ ನೀಡುವುದಾಗಿ ಹೇಳಿದೆ.

ಇದರಿಂದ ರಾಜ್ಯದ 5 ಲಕ್ಷ ಸರ್ಕಾರಿ ನೌಕರರು ದೀಪಾವಳಿ ಹಬ್ಬಕ್ಕೆ ಬಡ್ಡಿರಹಿತವಾಗಿ 10 ಸಾವಿರ ರೂ. ಹಬ್ಬದ ಮುಂಗಡ ಪಡೆಯಬಹುದು ಎಂಬುದಾಗಿ ಹೇಳುವ ಮೂಲಕ ಗುಜರಾತ್​ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ರಾಜ್ಯದ ನೌಕರರಿಗೆ ಹಬ್ಬದ ಸಂದರ್ಭದಲ್ಲಿ ಸಂತಸದ ಸುದ್ದಿಯನ್ನು ನೀಡಿದ್ದಾರೆ.

ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ಈ ಹಣವನ್ನು ಪೇ ಕಾರ್ಡ್​ ಮೂಲಕ ನೀಡಲಾಗುವುದು. ನೌಕರರು ಇದನ್ನು ಹತ್ತು ತಿಂಗಳ ಕಂತಿನಲ್ಲಿ ಮರು ಪಾವತಿಸಬೇಕು ಎಂಬುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net