108 ಗ್ರಾಂ ಚಿನ್ನಾಭರಣ‌ ಕಳವು ಮಾಡಿದ ಖತರ್ನಾಕ್ ಕಳ್ಳರು

Published on

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಮನೆಯೊಂದರಲ್ಲಿ ಐನಾತಿ ಕಳ್ಳರು‌ 108 ಗ್ರಾಂ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ.

ಗ್ರಾಮದ ರಾಜಮ್ಮ(50) ಚಿನ್ನಾಭರಣ‌ ಕಳೆದುಕೊಂಡವರು. ಇವರು ಜು.21 ರಾತ್ರಿ ಮನೆಯಲ್ಲಿ ಊಟ ಮಾಡಿ ಪಕ್ಕದ ಮತ್ತೊಂದು ಮನೆಯೊಂದರಲ್ಲಿ ಮಲಗಿದ್ದು ಖತರ್ನಾಕ್ ಕಳ್ಳರು ರಾತ್ರೋ ರಾತ್ರಿ ತೊಟ್ಟಿ ಮನೆಯ ಮೇಲ್ಬಾಗದಲ್ಲಿ ಅಳವಡಿಸಿದ್ದ ಮೆಸ್ ಹೊಡೆದು ಒಳ‌ ನುಗಿದ್ದು‌ ಅಲ್ಮೇರಾದಲ್ಲಿದ್ದ 108 ಗ್ರಾಂ ತೂಕ ದ ವಿವಿಧ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ ಈ ಬಗ್ಗೆ ರಾಜಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

20 ಗ್ರಾಂ ತೂಕದ ಚಿನ್ನದ ಎರಡು ಬಳೆ, 1 ಜೊತೆ ಮುತ್ತಿನ ಓಲೆ ಜುಮ್ಕಿ 10 ಗ್ರಾಂ, ಅವಲಕ್ಕಿ ಸರ 40 ಗ್ರಾಂ, 1 ಸರ 10 ಗ್ರಾಂ, ಬ್ರಾಸ್ ಲೆಟ್ 20 ಗ್ರಾಂ, ಚಿನ್ನದ ಮಾಟಿ 6 ಗ್ರಾಂ ಸೇರಿದಂತೆ 2 ಗ್ರಾಂನ ಎರಡು ಸಣ್ಣ ಉಂಗುರ ಕಳ್ಳವಾಗಿದ್ದು. ಸುಮಾರು‌ 5.50 ಲಕ್ಷ ಬೆಳೆ ಬಾಳುತ್ತದೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net