ಅಮೃತ ಮಹೋತ್ಸವವನ್ನು ಹಬ್ಬದ ರೀತಿ ಆಚರಿಸೋಣ

CTD 12 DC NEW )
Published on


ಚಿತ್ರದುರ್ಗ: ಸ್ವಾತಂತ್ರೃದ ಅಮೃತ ಮಹೋತ್ಸವ ಆಚರಣೆ ವಿಷಯ ಅತ್ಯಂತ ಹೆಮ್ಮೆ ತರುವಂಥದ್ದಾಗಿದ್ದು,ನಾವೆಲ್ಲರೂ ಇದನ್ನು ಹಬ್ಬದ ರೀತಿಯಲ್ಲಿ ಆಚರಿಸ ಬೇಕೆಂದು ಡಿಸಿ ಕವಿತಾ ಎಸ್.ಮನ್ನಿಕೇರಿ ನಾಗರಿಕರಿಗೆ ಮನವಿ ಮಾಡಿದರು. ನೆಹರು ಯುವ ಕೇಂದ್ರ,ಭಾರತೀಯ ಪುರಾತತ್ವ ಇ ಲಾಖೆ ಹಾಗೂ ದಾವಣಗೆರೆ ವಿವಿ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ನಗರದ ಕೋಟೆ ಆವರಣದಲ್ಲಿ ಆಯೋ ಜಿಸಿದ್ದ ಸ್ವಾತಂತ್ರೃ ದ ಅಮೃತ ಮಹೋತ್ಸವ 75 ವರ್ಷಗಳ ಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ಸಾಬರ್‌ಮತಿಯಲ್ಲಿ ಈ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿರಿಯರ ತ್ಯಾಗ,ಬಲಿದಾನವಿದೆ. ಇಂಥ ಸಂದರ್ಭದಲ್ಲಿ ಅವರ ಹೋರಾಟವನ್ನು ಸ್ಮರಿಸಬೇಕು. ದೇಶ ದ ಸಂಸ್ಕೃತಿ,ಐತಿಹಾಸಿಕ ಸ್ಥಳಗಳ ಸಂರಕ್ಷಿಸಬೇಕಿದೆ ಎಂದರು. ನೆಹರು ಯುವ ಕೇಂದ್ರದ ಉಪ ನಿರ್ದೇಶಕ ದಯಾನಂದ್‌ಜಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ರಾಜ್ಯನೆಹರು ಯುವ ಕೇಂದ್ರದ ನಿರ್ದೇಶಕ ಅತುಲ್ ಜೆ.ನಿಕಮ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಪುರಾತತ್ವ ಇಲಾಖೆ ಅಧೀಕ್ಷಕ ಡಾ.ಶಿವಕಾಂತ್ ಬಾಚ್‌ಪೇ,ಉಪ ಅಭಿಯಂತರ ಜೆ.ರಂಗನಾಥ್,ನೆಹರು ಯುವ ಕೇಂದ್ರ ಯುವ ಸಮನ್ವಯಾಧಿಕಾರಿ ಎನ್.ಸುಹಾಸ್,ದಾವಣಗೆರೆ ವಿವಿ ಪ್ರಾಧ್ಯಾಪಕರು ಮತ್ತಿತರರು ಇದ್ದರು. ಕಾರ‌್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ,ಪ್ರಬಂಧ,ಚಿತ್ರಕಲೆ ಸ್ಪರ್ಧೆ ಗಳು,ಸ್ವಚ್ಛತಾ ಕಾರ್ಯಕ್ರಮ,ಪಾರಂಪರಿಕ ನಡಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net