

Prison: ಕೊಲೆ ಮತ್ತು ಕೊಲೆ ಯತ್ನ ಆರೋಪದ ಮೇಲೆ 43 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ 104 ವರ್ಷದ ವೃದ್ಧನ ಕೇಸ್ ಹೈಕೋರ್ಟ್ನಿಂದ ಖುಲಾಸೆಗೊಂಡ ನಂತರ ಜೈಲಿಂದ ಶುಕ್ರವಾರ ಬಿಡುಗಡೆಗೊಂಡಿದ್ದಾನೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಗರದಲ್ಲಿ ತಿರಂಗಾಯಾತ್ರೆ ಯಶಸ್ವಿ
ಉತ್ತರಪ್ರದೇಶದ ಕೌಶಾಂಬಿ ಜಿಲ್ಲೆಯ ನಿವಾಸಿಯಾದ ಲಖನ್(104) ಇದೀಗ ಕೌಶಾಂಬಿ ಜೈಲಿನಿಂದ ಬಿಡುಗಡೆಗೊಂಡಿರುವ ವೃದ್ಧ. 1921ರ ಜ.4 ರಂದು ಜನಿಸಿದರು ಎಂದು ಜೈಲು ದಾಖಲೆಗಳು ತಿಳಿಸಿವೆ.
1977ರ ಆ.16 ರಂದು ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಕೊಲ್ಲಲ್ಪಟ್ಟ ಪ್ರಭು ಸರೋಜ್ ಅವರ ಸಾವಿನ ಪ್ರಕರಣಲ್ಲಿ ಭಾಗಿಯಾಗಿದ್ದಕ್ಕಾಗಿ ಅವರನ್ನು 1977ರಲ್ಲಿ ಬಂಧಿಸಲಾಯಿತು. 1982ರಲ್ಲಿ, ಲಖನ್ ಮತ್ತು ಇತರ ಮೂವರಿಗೆ ಪ್ರಯಾಗ್‌ರಾಜ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು, ಅದು ಸುದೀರ್ಘ 43 ವರ್ಷಗಳ ಬಳಿಕ (2025ರ ಮೇ.2) ಕೇಸ್ನಿಂದ ಅವರನ್ನು ಖುಲಾಸೆಗೊಳಿಸಿದೆ.
ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ನಾಲ್ವರು ಅಪರಾಧಿಗಳಲ್ಲಿ, ಮೂವರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದರು. ಜಿಲ್ಲೆಯ ಶರೀರಾ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಅವರ ಮಗಳ ಮನೆಯಲ್ಲಿ ಸದ್ಯಕ್ಕೆ ವಾಸಿಸುತ್ತಿದ್ದಾರೆ.(ಏಜೆನ್ಸೀಸ್)