100 ಸಸಿ ನೆಟ್ಟ ಪಾಲಿಕೆ : ವಿಶ್ವ ನಗರಗಳ ದಿನಾಚರಣೆ

Plantaion
Published on

ಬೆಂಗಳೂರು: ರಾಜಭವನ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ಸಸಿ ನೆಡುವ ಮೂಲಕ ‘ವಿಶ್ವ ನಗರಗಳ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಾಗತೀಕರಣ, ದೇಶಗಳ ನಡುವಿನ ಸಹಕಾರ ಮತ್ತು ವಿಶ್ವದ ಸುಸ್ಥಿರ ನಗರ ಅಭಿವೃದ್ಧಿಗೆ ವಿಶ್ವ ಸಂಸ್ಥೆಯು ಅ.31ನ್ನು ‘ವಿಶ್ವ ನಗರಗಳ ದಿನ’ ಎಂದು ೊಷಣೆ ಮಾಡಿದೆ. ನಗರದ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ವತಿಯಿಂದ ಅ.25 ರಿಂದ ಅ.31ರವರೆಗೆ ಸ್ಮಾರ್ಟ್ ಸಿಟೀಸ್ ಮಿಷನ್ ಟುಲಿಪ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕೊನೆಯ ದಿನವಾದ ಶನಿವಾರ ರಾಜಭವನ ಮತ್ತು ನೆಹರು ತಾರಾಲಯ ರಸ್ತೆ ಪಾದಚಾರಿ ಮಾರ್ಗದಲ್ಲಿ 100 ಸಸಿ ನೆಡಲಾಯಿತು ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net