ಒಂದು ರೂಪಾಯಿಗೆ 100 ಎಂಬಿ ಡೇಟಾ!

Jio
Published on

ಮುಂಬೈ: ದೇಶದ ಅತ್ಯಂತ ಅಗ್ಗದ ಪ್ರೀಪೇಯ್ಡ್ ಡೇಟಾ ಯೋಜನೆಯನ್ನು ರಿಲಯನ್ಸ್ ಜಿಯೋ ಪರಿಚಯಿಸಿದೆ. ಕೇವಲ ಒಂದು ರೂಪಾಯಿ ರೀಚಾರ್ಜ್ ಮಾಡಿದರೆ 100 ಎಂಬಿ ಡೇಟಾವನ್ನು 30 ದಿನಗಳ ವ್ಯಾಲಿಡಿಟಿಯೊಂದಿಗೆ ಒದಗಿಸುವ ಅಂಶ ಇದರಲ್ಲಿದೆ. ಮೈಜಿಯೋ ಆಪ್​ನಲ್ಲಷ್ಟೇ ಈ ಯೋಜನೆ ಗ್ರಾಹಕರಿಗೆ ಲಭ್ಯವಿದೆ.

ಈ ಯೋಜನೆಯಲ್ಲಿ ಇಂಟರ್​ನೆಟ್ ಬ್ರೌಸಿಂಗ್ ಸ್ಪೀಡ್ 64ಕೆಬಿಪಿಎಸ್ ಇರಲಿದೆ. ಇದೇ ವೇಳೆ 119 ರೂಪಾಯಿ ಪ್ರೀಪೇಯ್ಡ್ ರಿಚಾರ್ಜ್ ಯೋಜನೆಯನ್ನೂ ಇದು ಪರಿಷ್ಕರಿಸಿದ್ದು, ಅನ್​ಲಿಮಿಟೆಡ್ ಯೋಜನೆಗಳ ಪೋರ್ಟ್​ಫೋಲಿಯೋದಲ್ಲಿ ಗ್ರಾಹಕರಿಗೆ ಕೈಗೆಟಕುವ ಯೋಜನೆಯನ್ನಾಗಿ ಪರಿವರ್ತಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net