ವೀರಲೋಕ ಪುಸ್ತಕ ಸಂತೆಯಲ್ಲಿ ಒಂದು ವಿನೂತನ ಪ್ರಯೋಗ; 100 ಲೇಖಕರು ಒಂದೇ ಸಂತೆಯಡಿ | Books

ವಿಜಯವಾಣಿ (67)
Published on

ಬೆಂಗಳೂರು: ಕನ್ನಡ ಪುಸ್ತಕಲೋಕಗಳು ಎಲ್ಲೆಂದರಲ್ಲಿ ಸಿಗಬೇಕು, ಕನ್ನಡಿಗರಿರುವೆಡೆಯೇ ಅವು ಸಿಗಬೇಕು. ಕನ್ನಡ ಪುಸ್ತಕಗಳು (Books) ಕನ್ನಡಿಗರ ಬದುಕಿನ ಭಾಗವಾಗಬೇಕು ಎಂಬೆಲ್ಲಾ ಉದ್ದೇಶಗಳೊಂದಿಗೆ, ವೀರಲೋಕ ಒಂದಿಲ್ಲೊಂದು ಯೋಜನೆಗಳಲ್ಲಿ ತೊಡಗಿಸಿಕೊಂಡಿರುವುದು ನಿಮಗೆ ಗೊತ್ತೇ ಇದೆ.

ಇದೀಗ ಅಂತಹುದ್ದೇ ಒಂದು ಪ್ರಯತ್ನ ಅಲ್ಲಲ್ಲ ಪ್ರಯೋಗವಿದು! ಓದುಗರು ಲೇಖಕರು ಮುಖಾಮುಖಿಯಾಗಿಸುವುದು ಈ ಪ್ರಯೋಗದ ಉದ್ದೇಶ. ತನ್ನ ಮೆಚ್ಚಿನ ಲೇಖಕರನ್ನು ಕಾಣುವ ಆಸೆ ಓದುಗರಿಗಿರಬಹುದು, ತಮ್ಮ ಅನಾಮಿಕ ಓದುಗರನ್ನು ಭೇಟಿಯಾಗುವ ಆಸೆ ಸಾಹಿತಿಗಳಿಗೂ ಇರಬಹುದು. ಆ ಇಬ್ಬರ ಮುಖಾಮುಖಿಗೆ ಈ ಸಂತೆ ವೇದಿಕೆಯಾಗುತ್ತಿದೆ. ಇಂತಹ ಪ್ರಯೋಗಕ್ಕೆ ತುಂಬು ಪ್ರೀತಿಯಿಂದ ಒಪ್ಪಿಗೆ ನೀಡಿದ ಎಲ್ಲಾ ಸಾಹಿತಿಗಳಿಗೆ ವೀರಲೋಕ ಮನದಾಳದ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ. ಉಳಿದ ವಿವರಗಳನ್ನು ಪ್ರತಿ ದಿನವೂ ಕೊಡುತ್ತಿರುತ್ತೇವೆ.

ಮುಂದಿನ ಹದಿಮೂರು ದಿನಗಳ ಕಾಲ, ನಿಮ್ಮನ್ನು ಚೂರು ಹೆಚ್ಚೇ ಡಿಸ್ಟರ್ಬ್ ಮಾಡುತ್ತಿರುತ್ತೇವೆ.ದಯವಿಟ್ಟು ಕ್ಷಮಿಸಿ ಮತ್ತು ಪುಸ್ತಕ ಸಂತೆಗೆ ತಪ್ಪದೇ ಬನ್ನಿ. ಹೆಚ್ಚಿನ ಜನರಿಗೆ ಪುಸ್ತಕ ಸಂತೆ ಬಗ್ಗೆ ತಿಳಿಸಿ. ಇದು ಕನ್ನಡದ ಕೆಲಸ, ನಮ್ಮ ನಿಮ್ಮದೇ ಕೆಲಸ- ವೀರಕಪುತ್ರ ಶ್ರೀನಿವಾಸ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net