ಇಬ್ಬರ ಕೊಂದವನಿಗೆ 10 ವರ್ಷ ಜೈಲು

court hammer 1
Published on

ಬೆಂಗಳೂರು: ಬಾಳೆಕಾಯಿ ಮಂಡಿಯಲ್ಲಿ ಯಾವುದೇ ಉದ್ದೇಶ ಇಲ್ಲದೆ ಇಬ್ಬರನ್ನು ಹತ್ಯೆ ಮಾಡಿದ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ 67ನೇ ಸಿಸಿಎಚ್ ನ್ಯಾಯಾಲಯ ಆದೇಶಿಸಿದೆ.

ಅಂಜನಪ್ಪ ಗಾರ್ಡನ್ ನಿವಾಸಿ ಎಂ. ಗಣೇಶ್ (40) ಶಿಕ್ಷೆಗೆ ಗುರಿಯಾದ ಅಪರಾಧಿ. 2020ರ ಅಕ್ಟೋಬರ್ 18ರ ಬೆಳಗ್ಗೆ 6.30ರಿಂದ 8 ಗಂಟೆ ನಡುವೆ ಬಾಳೆಕಾಯಿ ಮಂಡಿಯಲ್ಲಿ ಏಕಾಏಕಿ ಚಾಕುವಿನಿಂದ ಅಂಜನಪ್ಪ ಗಾರ್ಡನ್ ನಿವಾಸಿ ಮಾರಿ ಮತ್ತು ್ಲವರ್ ಗಾರ್ಡನ್ ನಿವಾಸಿ ರಾಜೇಶ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದ.

ತೀವ್ರ ಗಾಯಗೊಂಡ ಇಬ್ಬರು ಅಸುನೀಗಿದ್ದರು. ಕಾಟನ್‌ಪೇಟೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡ ಎಂ.ಗಣೇಶ್‌ನ್ನು ಬಂಧಿಸಿದ್ದರು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಬಿ.ಎಸ್. ಪಾಟೀಲ್, ವಾದ ಮಂಡಿಸಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಎ. ಜಯಪ್ರಕಾಶ್, ಅಪರಾಧಿ ಗಣೇಶ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಜಿಲ್ಲಾ ಕಾನೂನು ನೆರವು ಸಮಿತಿ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net