

ಗುಜರಾತ್ನ ರಾಜಕೋಟ್ನಲ್ಲಿ 10 ವರ್ಷದ ಬಾಲಕನೋರ್ವ ಮಹಾತ್ಮ ಗಾಂಧೀಜಿಯವರಂತೆ ವೇಷ ಧರಿಸಿ, ಕೊವಿಡ್-19 ತಪಾಸಣೆಗೆ ಒಳಗಾಗಲು ಆಗಮಿಸಿದ್ದು ಗಮನಸೆಳೆದಿದೆ.
ಅಕ್ಟೋಬರ್ 2ರಂದು ಗಾಂಧಿ ಜಯಂತಿ ಇರುವ ನಿಮಿತ್ತ, ಅವರಂತೆ ವೇಷ ಧರಿಸಿ ಕರೊನಾ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಬಾಲಕ ಹೀಗೆ ಬಂದಿದ್ದ ಎಂದು ಹೇಳಲಾಗಿದೆ. ಗಾಂಧೀಜಿಯವರಂತೆ ಆಗಮಿಸಿ ಕರೊನಾ ಟೆಸ್ಟ್ಗೆ ಒಳಗಾದ ಬಾಲಕನ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಯನ್ನೂ ಪಡೆದಿದೆ. ಇದನ್ನೂ ಓದಿ: ಮಾಸ್ಕ್ ಧರಿಸದೇ ಇದ್ದರೆ 1000 ರೂ. ದಂಡ; ಗ್ರಾಮೀಣ ಭಾಗದಲ್ಲಿ 500 ರೂ. ಫೈನ್!
ಬಿಳಿ ಬಣ್ಣದ ಧೋತಿ ಧರಿಸಿ, ಮೈತುಂಬ ಶಾಲು ಹೊದ್ದು, ಕನ್ನಡಕ ಧರಿಸಿ, ಕೋಲು ಹಿಡಿದು ಬಂದ ಪುಟ್ಟ ಬಾಲಕ ಪಕ್ಕಾ ಗಾಂಧೀಜಿಯವರಂತೆ ಕಾಣುತ್ತಿದ್ದ. ಅವನೊಂದಿಗೆ ಪುಟ್ಟ ಬಾಲಕಿಯೂ ಸೀರೆ ಉಟ್ಟು ಬಂದಿದ್ದಳು. ಈ ವೇಳೆ ಮಾಧ್ಯಮವೊಂದರ ಜತೆ ಮಾತನಾಡಿದ ಬಾಲಕ, ಜನರು ಕರೊನಾಕ್ಕೆ ಹೆದರುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ತಪಾಸಣೆಗೆ ಒಳಗಾಗಬೇಕು ಎಂಬ ಅರಿವು ಮೂಡಿಸುವ ಸಲುವಾಗಿ ಹೀಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ನಾನು ನನ್ನ ಸ್ವಾಬ್ನ್ನು ಟೆಸ್ಟ್ಗೆ ನೀಡಿದ್ದೇನೆ. ಕರೊನಾ ವಿರುದ್ಧ ಹೋರಾಟದಲ್ಲಿ ಎಲ್ಲರೂ ಸಹಕರಿಸಿದರೆ ನಮ್ಮ ದೇಶ ಇನ್ನಷ್ಟು ಆರೋಗ್ಯಯುತವಾಗುತ್ತದೆ ಎಂದು ಹೇಳಿದ್ದಾನೆ. (ಏಜೆನ್ಸೀಸ್)