ಕಂದಕಕ್ಕೆ ಉರುಳಿದ ಲಾರಿ: ದೇವರ ದರ್ಶನ ಮುಗಿಸಿ ವಾಪಸ್​ ಬರುತ್ತಿದ್ದ 10 ಜನ ಸಾವು

ethuva
Published on

ಲಕ್ನೋ: ಯಾತ್ರಾರ್ಥಿಗಳನ್ನು ಕರೆ ತರುತ್ತಿದ್ದ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಹತ್ತು ಜನ ಮೃತಪಟ್ಟು 30 ಜನ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇಥುವಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಸುಮಾರು 100 ಜನ ಆಗ್ರಾ ಬಳಿಯ ಲಕ್ನಾ ದೇವಿ ದರ್ಶನ ಮಾಡಿಕೊಂಡು ಲಾರಿಯೊಂದರಲ್ಲಿ ತಮ್ಮ ಹಳ್ಳಿಗೆ ವಾಪಸ್ ಬರುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಲಾರಿ ಬಡೇಪುರ ಬಳಿ 30 ಅಡಿ ಕಂದಕಕ್ಕೆ ಉರುಳಿ ಬಿದ್ದಿದೆ.

ಗಾಯಾಳುಗಳನ್ನು ಇಥುವಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತರ ಸಂಖ್ಯೆ ಹೆಚ್ಚಳ ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಮಹಿಳೆ ಹಾಗೂ ಮಕ್ಕಳ ಸಂಖ್ಯೆಯೇ ಅಧಿಕವಾಗಿದೆ.

ಈ ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರು ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net