ಭೀಕರ ಭೂಕುಸಿತ; ರಾತ್ರಿ ನಿದ್ದೆ ಮಾಡುತ್ತಿದ್ದವರು ಜೀವಂತ ಸಮಾಧಿ

Land Slide
Published on

ನೇಪಾಳದ ಸಿಂಧುಪಾಲ್​ಚೌಕ್ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಉಂಟಾದ ಭೀಕರ ಭೂಕುಸಿತದಲ್ಲಿ ಓರ್ವ ಭಾರತೀಯ ಸೇರಿ, 10 ಮಂದಿ ಜೀವ ಕಳೆದುಕೊಂಡಿದ್ದಾರೆ.

ಒಟ್ಟು 8 ಮಂದಿ ಕೂಲಿ ಕಾರ್ಮಿಕರಾಗಿದ್ದು ಏಳು ಮಂದಿ ಬಿರ್​ಗಂಜ್​ನವರು ಹಾಗೂ ಓರ್ವ ಭಾರತೀಯ. ಇವರೆಲ್ಲ ತಗಡಿನ ಮೇಲ್ಛಾವಣಿಯಿರುವ ಮನೆಯಲ್ಲಿ ಮಲಗಿದ್ದರು. ಒಮ್ಮಿಂದೊಮ್ಮೆಲೇ ಭೂಕುಸಿತ ಉಂಟಾಗಿ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಎಂಟೂ ಶವಗಳನ್ನೂ ಹೊರಗೆ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗೇ, ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಬರುವಾ ಪ್ರದೇಶದಲ್ಲಿ ವಾಸವಾಗಿದ್ದ ದಂಪತಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net