ದುರ್ಗಾ ದೇವಿ ಮೂರ್ತಿ ವಿಸರ್ಜನೆ ವೇಳೆ ಟ್ರ್ಯಾಕ್ಟರ್ ಕೆರೆಗೆ ಬಿದ್ದು 10 ಮಂದಿ ಬಲಿ| Indore

Georgia
Published on

ಇಂದೋರ್: ನವರಾತ್ರಿ ಆಚರಣೆಯ ನಂತರ ಭಕ್ತರು ದುರ್ಗಾ ದೇವಿಯ ವಿಗ್ರಹಗಳನ್ನು ವಿಸರ್ಜಿಸಲು ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಟ್ರಾಲಿಯೊಂದು ಕೆರೆಗೆ ಉರುಳಿ ಬಿದ್ದು, ಸುಮಾರು ಹತ್ತು ಜನರು ಸಾವನ್ನಪ್ಪಿರುವ ಘಟನೆ ಇಂದು (ಅ.02) ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.

ಈ ಬಗ್ಗೆ ಖಾಂಡ್ವಾ ಪೊಲೀಸ್ ಎಸ್‌ಪಿ ಮನೋಜ್ ರೈ ಮಾತನಾಡಿದ್ದು, ಸಂಜೆ 5 ಗಂಟೆ ಸುಮಾರಿಗೆ ತಾತ್ಕಾಲಿಕ ಸೇತುವೆಯ ಮೇಲೆ ನಿಲ್ಲಿಸಿದ್ದ ವಾಹನ ಆಳವಾದ ಸರೋವರಕ್ಕೆ ಉರುಳಿ ಬಿದ್ದಾಗ ಈ ದುರಂತ ಸಂಭವಿಸಿದೆ. ಬಲಿಪಶುಗಳನ್ನು ರಕ್ಷಿಸಲು ಸುಮಾರು 10 ರಿಂದ 15 ಜನರು ಕೆರೆಗೆ ಹಾರಿದ್ದಾರೆ. ಮುಳುಗಿ ಸಾವನ್ನಪ್ಪಿದವರಲ್ಲಿ ಆರು ಮಂದಿ ಮಹಿಳೆಯರು, ಅಪ್ರಾಪ್ತ ವಯಸ್ಕರು ಸೇರಿದಂತೆ 10 ಜನರು ಇದ್ದರು. ಘಟನೆಯಲ್ಲಿ ಎಂಟು ವರ್ಷದ ಬಾಲಕಿ ನಾಪತ್ತೆಯಾಗಿದ್ದು, ರಕ್ಷಣಾ ತಂಡಗಳು ಆಕೆಯನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

(ಏಜೆನ್ಸೀಸ್)

ಘಟನೆಯಲ್ಲಿ ಗಾಯಗೊಂಡ ಮೂವರು ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖಾಂಡ್ವಾದ ಉಪ ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಬಹುಗುಣ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಂಜಾನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿವೆ. ಅಪಘಾತ ಸಂಭವಿಸಿದಾಗ ಸುಮಾರು 30 ರಿಂದ 32 ಜನರು ಟ್ರಾಲಿಯಲ್ಲಿದ್ದರು ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net