ವಿದೇಶದಿಂದ ಡ್ರಗ್ ತರಿಸಿದ್ದ 10 ಪೆಡ್ಲರ್​​ಗಳ ಬಂಧನ

Drugpedller
Published on

ಬೆಂಗಳೂರು: ಡಾರ್ಕ್‌ನೆಟ್ ಬಳಸಿ ವಿದೇಶದಿಂದ ಡ್ರಗ್ಸ್ ತರಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಪೂರೈಕೆ ಮಾಡುತ್ತಿದ್ದ 10 ಮಂದಿ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ ನಿತೀನ್, ಜೆಸಿ ನಗರದ ಕಾರ್ತಿಕ್‌ಗೌಡ, ಹಲಸೂರಿನ ಝಮಾನ್ ಹಂಜಾಮಿನಾ, ಮಹಮದ್ ಆಲಿ, ಅಮಲ್ ಬೈಜು ಸೇರಿ ಮತ್ತಿತರರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 90 ಲಕ್ಷ ರೂ. ಮೌಲ್ಯದ 660 ಎಲ್‌ಎಸ್‌ಡಿ, 386 ಎಂಡಿಎಂಎ, 180 ಎಕ್ಸ್‌ಟೆಸಿ ಮಾತ್ರೆ, ಕೊಕೇನ್, 12 ಮೊಬೈಲ್ ಫೋನ್, 3 ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ವಿದೇಶದಿಂದ ಡ್ರಗ್ಸ್ ತರಿಸಿಕೊಂಡಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದರು‌. ಇದನ್ನು ಆಧರಿಸಿ ನಗರದಾದ್ಯಂತ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 8 ಪ್ರಕರಣಗಳಲ್ಲಿ 10 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಟಾರ್ ಸರ್ಚ್ ಇಂಜಿನ್ ಬಳಸಿ ಡಾರ್ಕ್‌ನೆಟ್ ಮುಖಾಂತರ ಎಂಪೈರ್ ಮಾರ್ಕೆಟ್, ಸಿಲ್ಕ್ ರೂಟ್, ಡ್ರಗ್ ಬೋರ್ಡ್ ಮುಂತಾದ ವೆಬ್‌ಸೈಟ್‌ಗಳಿಂದ ಪಾರ್ಸೆಲ್ ತರಿಸಿಕೊಂಡಿದ್ದರು. ಬಿಟ್‌ಕಾಯಿನ್ ವ್ಯವಹಾರ ನಡೆಸಿದ್ದಾರೆ‌. ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net