1 ಲಕ್ಷ ರೂ. ಮೌಲ್ಯದ 15 ಗ್ರಾಂ ತೂಕದ ಚಿನ್ನದ ಸರ ಕಳವು

Crime Logo
Published on

ಸಹೋದರನ ವಿವಾಹದಲ್ಲಿ ವ್ಯಕ್ತಿಯೊಬ್ಬರ ಸುಮಾರು 1 ಲಕ್ಷ ರೂ. ಮೌಲ್ಯದ 15 ಗ್ರಾಂ ತೂಕದ ಚಿನ್ನದ ಸರ ಕಳವಾಗಿದೆ.

ನಗರದ ಹೂಟಗಳ್ಳಿ ನಿವಾಸಿ ಅಭಿಷೇಕ್ ಎಂಬವರೇ ಚಿನ್ನದ ಸರ ಕಳೆದುಕೊಂಡವರು.

ಅವರು ತಮ್ಮ ಸಹೋದರ ಕೀರ್ತನ್ ಎಂಬವರ ವಿವಾಹಕ್ಕೆ ರಾಮಕೃಷ್ಣನಗರದಲ್ಲಿರುವ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು,

ಚಿನ್ನದ ಸರ ಇದ್ದ ಬ್ಯಾಗ್ ಅನ್ನು ಕೊಠಡಿಯಲ್ಲಿ ಇರಿಸಲಾಗಿದ್ದು, ಕೆಲ ಹೊತ್ತಿನ ಬಳಿಕ ಬ್ಯಾಗ್ ಪರಿಶೀಲಿಸಿದ ವೇಳೆ ಸರ ಕಳವಾಗಿದೆ ಎಂದು ದೂರು ನೀಡಲಾಗಿದ್ದು, ಕುವೆಂಪು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net