1 ಕೆಜಿ ಜಿರಳೆ ಬಲು ದುಬಾರಿ! ಈ ಖಾದ್ಯಕ್ಕೆ ಇದೇ ಭಾರಿ ಬೇಡಿಕೆ...

cockroaches
Published on

ನವದೆಹಲಿ: ಊರು, ಜಿಲ್ಲೆ, ನಗರ, ಪ್ರದೇಶ, ದೇಶ, ವಿದೇಶದಲ್ಲಿ ಭಾಷೆ, ಪದ್ಧತಿ ಆಹಾರದಂತೆ ಊಟ,ತಿಂಡಿ ಕೂಡಾ ವಿಶೇಷ ಮತ್ತು ವಿಭಿನ್ನವಾಗಿರುತ್ತದೆ. ಕುರಿ, ಕೋಳಿ ಮಾಂಸ, ಮೀನು ಸೇವನೆ ಮಾಡುವವರ ಮಧ್ಯೆ ಕೆಲವರು ಹುಳುಗಳನ್ನು ತಿಂದು ಜೀವನ ಸಾಗಿಸುತ್ತಾರೆ. ನಾವು ಇಂದು ಚೀನಾದಲ್ಲಿ ಜಿರಳೆಗೆ ಇರುವ ಬೇಡಿಕೆ ಕುರಿತಾಗಿ ಹೇಳಲಿದ್ದೇವೆ.

ಭಾರತ ಸೇರಿದಂತೆ ಪ್ರಪಂಚದಾದ್ಯಂತ ಜನರು ವಿವಿಧ ರೀತಿಯ ಪ್ರಾಣಿಗಳು ಮತ್ತು ಕೀಟಗಳನ್ನು ತಿನ್ನುತ್ತಾರೆ. ಅದರಲ್ಲಿ ಜಿರಳೆಯೂ ಒಂದು. ಚೀನಾ ಮತ್ತು ಆಫ್ರಿಕಾದಲ್ಲಿ ಜಿರಳೆಗಳನ್ನು ಆಹಾರವಾಗಿ ಬಳಸಲಾಗುತ್ತದೆ. ಅವುಗಳಲ್ಲಿರುವ ಕೆಲವು ಪೋಷಕಾಂಶಗಳು ಇದಕ್ಕೆ ಕಾರಣ. ಅದಕ್ಕಾಗಿಯೇ ಪ್ರಪಂಚದ ಕೆಲವು ಭಾಗಗಳಲ್ಲಿ ಜಿರಳೆಗಳು ಚಿನ್ನದಷ್ಟೇ ಮೌಲ್ಯಯುತವಾಗಿವೆ.

ಮೀನು, ಆಡು ಮತ್ತು ಕೋಳಿಗಳಲ್ಲಿ ಪ್ರೋಟೀನ್ ಅಂಶವಿರುವಂತೆಯೇ ಜಿರಳೆಗಳಲ್ಲೂ ಒಂದು ಬಗೆಯ ಪ್ರೋಟೀನ್ ಅಂಶವಿದೆ ಅಂತೆ. 14 ರಷ್ಟು ಪ್ರೋಟೀನ್ ಜಿರಳೆಗಳಲ್ಲಿದೆ ಎಂದು ವರದಿಯಾಗಿದೆ. ಈ ಕಾರಣಕ್ಕಾಗಿ, ಚೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಜಿರಳೆಗಳನ್ನು ಆಹಾರವಾಗಿ ಬಳಸಲಾಗುತ್ತದೆ. ಜಿರಳೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೆಲವರು ಈ ಕೀಟವನ್ನು ಸಾಕಲು ಆರಂಭಿಸಿದ್ದಾರೆ.  ಜಿರಳೆಗಳನ್ನು ಸಾಕಲಾಗುತ್ತದೆ ಮತ್ತು ಉತ್ತಮ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಪ್ರಸ್ತುತ, ಸುಮಾರು 6,000 ಕೀಟಗಳನ್ನು ತಿನ್ನಲು ಬಳಸಲಾಗುತ್ತದೆ. 2030 ರ ವೇಳೆಗೆ ಸುಮಾರು 8 ಬಿಲಿಯನ್ ಜನರು ಜಿರಳೆಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ.

ಜಿರಳೆ ತಳಿಗಾರರು ಈ ಬಗ್ಗೆ ಮಾತನಾಡುತ್ತಾ, ಆಫ್ರಿಕಾದ ತಾಂಜಾನಿಯಾದಲ್ಲಿ ಜಿರಳೆಗಳು ಹೇರಳವಾಗಿ ಬೆಳೆಯುತ್ತವೆ. ಇಲ್ಲಿ 1 ಕೆಜಿ ಜಿರಳೆಗಳನ್ನು 5 ಯುರೋಗಳಿಗೆ (458 ರೂಪಾಯಿ) ಮಾರಾಟ ಮಾಡಲಾಗುತ್ತದೆ. ಇಲ್ಲಿ ಅನೇಕ ಜಿರಳೆ ಸಾಕಣೆದಾರರು ಇದ್ದಾರೆಎಂದಿದ್ದಾರೆ

ಜಿರಳೆ ಎಣ್ಣೆಯನ್ನೂ ಉತ್ಪಾದಿಸಲಾಗುತ್ತಿದೆ. ವಿದೇಶದಲ್ಲಿ ರೆಸ್ಟೋರೆಂಟ್‌ಗಳಲ್ಲಿ ಜಿರಳೆಗಳಿಗಾಗಿ ವಿಶೇಷ ಖಾದ್ಯವೂ ಇದೆ. ಇದಲ್ಲದೆ, ಜಿರಳೆಗಳನ್ನು ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.  ಉಗಾಂಡಾ ಮತ್ತು ಆಫ್ರಿಕಾ, ಬುಡಕಟ್ಟು ಜನರು ಜಿರಳೆಯನ್ನು ತಮ್ಮ ಮುಖ್ಯ ಆಹಾರವೆಂದು ಪರಿಗಣಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net