1.90 ಲಕ್ಷ ರೂ. ಮೌಲ್ಯದ ಬಿತ್ತನೆ ಬೀಜ, ರಸಗೊಬ್ಬರ ವಶಕ್ಕೆ

1414
Published on

ಬೆಳಗಾವಿ: ಸವದತ್ತಿ ತಾಲೂಕಿನ ಅಕ್ಕಿಸಾಗರ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಕೃಷಿ ಪರಿಕರ ಮಾರುತ್ತಿದ್ದ ಆಂಜನೇಯ ಅಗ್ರೋ ಸೆಂಟರ್ ಮೇಲೆ ಸೋಮವಾರ ಕೃಷಿ ಇಲಾಖೆಯ ಜಾಗೃತಿ ದಳದ ಅಧಿಕಾರಿಗಳು ದಾಳಿ ನಡೆಸಿ 1.90 ಲಕ್ಷ ರೂ. ಮೌಲ್ಯದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಜಪ್ತಿ ಮಾಡಿಕೊಂಡಿದ್ದಾರೆ. ಇಲಾಖೆಯಿಂದ ಪರವಾನಗಿ ಪಡೆಯದೆ ಹಲವು ತಿಂಗಳಿಂದ ಬೀಜ, ರಸಗೊಬ್ಬರ, ಕೀಟನಾಶಕ ಸೇರಿ ವಿವಿಧ ಕೃಷಿ ಪರಿಕರ ಮಾರಾಟ ಮಾಡುತ್ತಿದ್ದರು.

ಮಾಹಿತಿ ಆಧಾರದ ಮೇಲೆ ಅಂಗಡಿ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವುದು ಖಚಿತವಾಗಿದೆ. ದಾಳಿ ವೇಳೆ 30 ವಿವಿಧ ರೀತಿಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಜಪ್ತಿ ಮಾಡಿಕೊಂಡು ಮಳಿಗೆ ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಾಗೃತಿ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಇಲಾಖೆಯ ಜಾಗೃತಿ ದಳದ ಅಧಿಕಾರಿಗಳಾದ ಆರ್.ಬಿ.ಪಾಟೀಲ, ಸುಪ್ರೀತಾ ಅಂಗಡಿ, ರವಿ ವರಗಣ್ಣವರ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net