ಶ್ರೀಕಂಠೇಶ್ವರಸ್ವಾಮಿ ದೇಗುಲದ ಹುಂಡಿಯಲ್ಲಿ 1.78 ಕೋಟಿ ರೂ. ಸಂಗ್ರಹ

1711635384880
Published on

ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ 1.78 ಕೋಟಿ ರೂ.ಸಂಗ್ರಹವಾಗಿದೆ.


ಒಟ್ಟು 1,78,29,667 ರೂ. ನಗದು, 123.8 ಗ್ರಾಂ ಚಿನ್ನ, 4.6 ಕೆ.ಜಿ. ಬೆಳ್ಳಿ, 26 ವಿದೇಶಿ ಕರೆನ್ಸಿ ಲಭ್ಯವಾಗಿದೆ. ಗುರುವಾರ ಒಟ್ಟು 34 ಹುಂಡಿಗಳ ಹಣ ಎಣಿಕೆ ಮಾಡಲಾಗಿದ್ದು, ಇದು ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾದ ಮೊತ್ತವಾಗಿದೆ


ದೇವಾಲಯದ ದಾಸೋಹ ಭವನದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಎಣಿಕೆ ಕಾರ್ಯ ನೆರವೇರಿತು. ದೇವಾಲಯದ ಸಿಬ್ಬಂದಿ, ಕೆನರಾ ಬ್ಯಾಂಕ್ ನೌಕರರು ಹಾಗೂ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ನೂರಾರು ಮಹಿಳೆಯರು ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಎಣಿಕೆ ಸ್ಥಳವನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಯಿತು.


ದೇವಾಲಯದ ಇಒ ಜಗದೀಶ್‌ಕುಮಾರ್, ಚಾಮುಂಡಿ ಬೆಟ್ಟದ ಇಒ ಸಿ.ಜಿ.ಕೃಷ್ಣ, ತಲಕಾಡಿನ ವೈದ್ಯನಾಥೇಶ್ವರ ಸಮೂಹ ದೇವಾಲಯಗಳ ಇಒ ವೆಂಕಟೇಶ್‌ಪ್ರಸಾದ್, ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಎಇಒ ಸತೀಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಲಕ್ಷ್ಮೀ ಎಣಿಕೆ ಉಸ್ತುವಾರಿ ಹೊತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net