

ಬೆಂಗಳೂರು: ಗುಪ್ತಾಂಗದಲ್ಲಿ ಮಾದಕವಸ್ತು ಕೊಕೇನ್ ಇಟ್ಟುಕೊಂಡು ಹೋಗುತ್ತಿದ್ದ ವಿದೇಶಿ ಮಹಿಳೆಯನ್ನು ಕೆಐಎಎಲ್ ಕಸ್ಟಮ್್ಸ ಅಧಿಕಾರಿಗಳು ಬಂಧಿಸಿದ್ದಾರೆ.
ಗ್ವಾಟೆಮಾಲಾದ ಹೆರೆರಾ ವ್ಯಾಲೆಂಜ್ಯುವೆಲಾ (30) ಬಂಧಿತ ಮಹಿಳೆ. ಈಕೆಯಿಂದ 8.31 ಕೋಟಿ ರೂ. ಮೌಲ್ಯದ 1.385 ಕೆ.ಜಿ. ಕೊಕೇನ್ ಜಪ್ತಿ ಮಾಡಲಾಗಿದೆ. ಏರ್ಲೈನ್ಸ್ ಇಟಿ-690 ವಿಮಾನದಲ್ಲಿ ಮಾ.2ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯ ತಪಾಸಣೆ ವೇಳೆ ಅನುಮಾನಾಸ್ಪದ ವಸ್ತು ಮೆಟಲ್ ಡಿಟೆಕ್ಟರ್ನಲ್ಲಿ ಕಂಡು ಬಂದಿತ್ತು. ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದಾಗ ಗುಪ್ತಾಂಗದಲ್ಲಿ ಕೊಕೇನ್ ಇಟ್ಟುಕೊಂಡಿರುವುದು ಪತ್ತೆಯಾಗಿದೆ.
ಮಾತ್ರೆ ಆಕಾರದಲ್ಲಿರುವ 150 ಕ್ಯಾಪ್ಸೂಲ್ಗಳಲ್ಲಿ ಕೊಕೇನ್ ಪೌಡರ್ ತುಂಬಲಾಗಿತ್ತು ಎಂದು ಕಸ್ಟಮ್್ಸ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.