VIDEO| ಉದ್ಘಾಟನೆಯಾದ 40 ದಿನದಲ್ಲೇ ಬಿರುಕುಬಿಟ್ಟ ಬ್ರಿಡ್ಜ್​

Bridge Cracks
Published on

ಸೂರತ್​: 118 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ, ಸೇತುವೆಯೊಂದು ಉದ್ಘಾಟನೆಯಾದ 40 ದಿನಗಳಲ್ಲೇ ಬಿರುಕು ಬಿಟ್ಟಿರುವ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ.

ಸೂರತ್​ ನಗರದ ತಾಪಿ ನದಿಯ ಅಂಚಿನಲ್ಲಿ ಕಟ್ಟಲಾಗಿದ್ದ, ವೇದ್-ವಾರಿಯಾವ್​ ಸೇತುವೆಯು ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದ್ದು, ಆಡಳಿತರೂಢ ಬಿಜಪಿಯು ವಿಪಕ್ಷಗಳಾದ ಕಾಂಗ್ರೆಸ್​ ಹಾಗೂ ಎಎಪಿ ಕೆಂಗಣ್ಣಿಗೆ ಗುರಿಯಾಗಿದೆ.

ಮೇ 17ರಂದು ಉದ್ಘಾಟನೆಯಾಗಿದ್ದ, 1.5 ಕಿಲೋಮೀಟರ್​ ಉದ್ದದ ಸೇತುವೆಯು ಸೂರತ್​ ನಗರದಿಂದ ವೇದ್​-ವಾರಿಯಾವ್​ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವಾರಿಯಾವ್​ ಕಡೆಗೆ ಸಂಪರ್ವಕಿಸುವ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ತನಿಖೆಗೆ ಆದೇಶಿಸಿ

ಸ್ಥಳಕ್ಕೆ ಭೇಟಿ ನೀಡಿದ ಸೂರತ್​ ನಗರ ಪಾಲಿ ವಿಪಕ್ಷ ಸದಸ್ಯ ಧರ್ಮೇಶ್​ ಭಂಡೇರಿ ಉದ್ಘಾಟನೆಯಾದ 40 ದಿನಗಳಲ್ಲೇ ಬ್ರಿಡ್ಜ್​ ಬಿರುಕು ಬಿಟ್ಟಿದ್ದು, ನಿರ್ಮಾಣ ಪ್ರಕ್ರಿಯೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿದೆ. ಪ್ರಕರಣವನ್ನು ಹೈಕೋರ್ಟ್​ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಬಿಜೆಪಿ ನಾಯಕರೊಬ್ಬರ ಪರಮಾಪ್ತ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡಿದ ಪರಿಣಾಮ ಈ ರೀತಿ ಆಗಿದೆ ಎಂದು ಆರೋಪಿಸಿದ್ದಾರೆ.

ಬ್ರಿಡ್ಜ್​ ಬಿರುಕು ಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಗುಜರಾತ್​ ಎಎಪಿ ಘಟಕದ ಅಧ್ಯಕ್ಷ ಇಸುದಾನ್​ ಗದ್ವಿ ನಿರ್ಮಾಣ ಕಾರ್ಯದ ವಿಚಾರವಾಗಿ ಬಿಜೆಪಿಯಿಂದ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದ್ದು, ಇತ್ತೀಚಿಗೆ ರಾಜ್ಯಾದ್ಯಂತ ಮಳೆಯಿಂದ ಹಾನಿಗೊಳಗಾದ ಸೇತುವೆಗಳ ಕುರಿತು ವಿವರವಾದ ತನಿಖೆ ನಡೆಸಬೇಕು. ಸಿಬಿಐ ಅಥವಾ ಜಾರಿ ನಿರ್ದೇಶನಾಲಯಕ್ಕೆ ಈ ಸಂಬಂಧ ತನಿಖೆಗೆ ಅದೇಶಿಸಬೇಕು ಎಂದು ಒತ್ತಾಯಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net