More

    2021ರ ಮೊದಲ ಚಿತ್ರವಾಗಿ ‘ರಾಜತಂತ್ರ’

    ಬೆಂಗಳೂರು: ವರ್ಷದ ಮೊದಲ ಚಿತ್ರವಾಗಿ ಯಾವ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಪ್ರತೀವರ್ಷ ಸಹಜ. ರಾಘವೇಂದ್ರ ರಾಜಕುಮಾರ್ ಅಭಿನಯದ ‘ರಾಜತಂತ್ರ’ ಚಿತ್ರವು ಜನವರಿ ಒಂದರಂದು ಬಿಡುಗಡೆಯಾಗಲಿದ್ದು, ಈ ಮೂಲಕ ಮುಂದಿನ ವರ್ಷದ ಮೊದಲ ಚಿತ್ರವಾಗಲಿದೆ.

    ಛಾಯಾಗ್ರಾಹಕ ಪಿವಿಆರ್ ಸ್ವಾಮಿ ಮೊದಲ ಬಾರಿಗೆ ನಿರ್ದೇಶಿಸಿರುವ ‘ರಾಜತಂತ್ರ’ ಚಿತ್ರವು ಅಕ್ಟೋಬರ್ 4ರಂದು ಪ್ರಾರಂಭವಾಗಿತ್ತು. ಈ ಎರಡೂವರೆ ತಿಂಗಳಲ್ಲಿ ಚಿತ್ರೀಕರಣ ಮುಗಿದು ಚಿತ್ರ ಸೆನ್ಸಾರ್ ಆಗಿರುವುದಷ್ಟೇ ಅಲ್ಲ, ಇತ್ತೀಚೆಗೆ ನಟ ಪುನೀತ್ ರಾಜಕುಮಾರ್ ಅವರು ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.

    ಈ ಚಿತ್ರದಲ್ಲಿ ನಿವೃತ್ತ ಸೈನ್ಯಾಧಿಕಾರಿ ಕ್ಯಾಪ್ಟನ್ ರಾಜಾರಾಮ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಘವೇಂದ್ರ ರಾಜಕುಮಾರ್, ತಮ್ಮ ವೃತ್ತಿಜೀವನದಲ್ಲೇ ಇಂಥದ್ದೊಂದು ಪಾತ್ರ ಮಾಡಿಲ್ಲ ಎನ್ನುತ್ತಾರೆ. ‘ನಾನು ಮತ್ತೆ ಅಭಿನಯಿಸುವುದಕ್ಕೆ ಸಾಧ್ಯ ಎಂಬ ನಂಬಿಕೆಯೇ ಇರಲಿಲ್ಲ. ಅಭಿನಯಿಸಿದ್ದಷ್ಟೇ ಅಲ್ಲ, ಈ ತರಹದ್ದೊಂದು ಪಾತ್ರ ಮಾಡಿರುವ ಖುಷಿ ಇದೆ. ಈ ಚಿತ್ರದಲ್ಲಿ ನಟನೆ ಮಾಡಿದ್ದೇನೆ ಎನ್ನುವುದಕ್ಕಿಂತ ಮಾಡಿಸಿದ್ದಾರೆ ಎನ್ನುವುದು ಸೂಕ್ತ’ ಎನ್ನುತ್ತಾರೆ ರಾಘಣ್ಣ. ಜೆ.ಎಂ. ಪ್ರಹ್ಲಾದ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಜತೆಗೆ ದೊಡ್ಡಣ್ಣ, ಶ್ರೀನಿವಾಸಮೂರ್ತಿ, ಭವ್ಯ, ಶಂಕರ್ ಅಶ್ವತ್ಥ್ ಮುಂತಾದವರು ನಟಿಸಿದ್ದಾರೆ.

    ಕಿಲಾಡಿ ಜತೆ ಪ್ರಣೀತಾ ಥೈಯಾ ಥಕ; ರವಿತೇಜ ಚಿತ್ರದ ಹಾಡಿನಲ್ಲಿ ಹೆಜ್ಜೆ..

    ಹೊಸ ವರ್ಷದಲ್ಲಿ ನಿಮ್ಮ ವಿಶ್ವರೂಪಕ್ಕೆ ಕಾಯ್ತಿದ್ದೀನಿ… | ರಮೇಶ್​ ಅರವಿಂದ್​ ಅವರ ‘ಸ್ಫೂರ್ತಿಯಿಂದ ರಮೇಶ್…​’ ಅಂಕಣ

    ದಯವಿಟ್ಟು ಸಿಕ್ಕಿಹಾಕೋಬೇಡಿ, ನಿಮ್ಮ ಹೆಸ್ರು ಗೊತ್ತಾದ್ರೆ ಮುಂದಾಗೋದ್ನ ಯಾರೂ ತಡೆಯೋಕಾಗಲ್ಲ; ವಿಷ್ಣು ಪುತ್ಥಳಿ ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್​ ವಾರ್ನಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts